ಕಾಸರಗೋಡು: ತೆಂಗು ಬೇಸಾಯ ಪದ್ಧತಿಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಐಸಿಎಆರ್-ಸಿಪಿಸಿಆರ್‍ಐನಲ್ಲಿ ಆರಂಭಗೊಮಡಿತು. ಕಾಸರಗೋಡಿನಲ್ಲಿ ಎಸ್‍ಸಿ ಮತ್ತು ಎಸ್‍ಟಿ ಸಮುದಾಯದ ನಿರುದ್ಯೋಗಿ ಯುವಕರ ಅನುಕೂಲಕ್ಕಾಗಿ ಎಂಟು ತಿಂಗಳ ಕಾಲಾವಧಿಯ ತರಬೇತಿ ಶಿಬಿರವನ್ನು ಐಸಿಎಆರ್-ಸಿಪಿಸಿಆರ್‍ಐ ಆಯೋಜಿಸಿದೆ.
ಕೃಷಿ ಇಲಾಖೆಯ ಪ್ರಿನ್ಸಿಪಲ್ ಕೃಷಿ ಅಧಿಕಾರಿ ಮಿನಿ ಪಿ.ಜಾನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತೆಂಗು ಕ್ಷೇತ್ರದಲ್ಲಿ ನುರಿತ ವ್ಯಕ್ತಿಗಳ ಕೊರತೆ ಈ ವಲಯ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ನೀರಾ ಮತ್ತು ಮೌಲ್ಯವರ್ಧಿತ ಉತ್ಪನ್ನಗಳು, ತೆಂಗಿನ ನಾಟಿ ವಸ್ತುಗಳ ಉತ್ಪಾದನೆ, ತೆಂಗಿನ ಕೃಷಿ-ತಂತ್ರಜ್ಞಾನಗಳು ಮತ್ತು ಮೂಲ ಕಂಪ್ಯೂಟರ್ ಅಪ್ಲಿಕೇಶನ್‍ಗಳು ಮತ್ತು ಕಚೇರಿ ಯಾಂತ್ರೀಕೃತಗೊಂಡ ಕಚೇರಿ ವ್ಯವಸ್ಥೆ ಎಂಬ ನಾಲ್ಕು ತರಬೇತಿ ಕಾರ್ಯಕ್ರಮಗಳಿಗಾಘಿ ಒಟ್ಟು 21 ಪ್ರಶಿಕ್ಷಣಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಎಸ್‍ಸಿ ಮತ್ತು ಎಸ್‍ಟಿ ಕೇರಳ ರಾಜ್ಯ ಅಭಿವೃದ್ಧಿ ನಿಗಮದ ಕಾಸರಗೋಡು ಜಿಲ್ಲಾ ವ್ಯವಸ್ಥಾಪಕ ಹರಿಕುಮಾರ್ ಮುಖ್ಯ ಭಾಷಣ ಮಾಡಿ ಐಸಿಎಆರ್-ಸಿಪಿಸಿಆರ್‍ಐ ದೀರ್ಘಾವಧಿಯ ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಹೊಂದುವ ವಿಶಿಷ್ಟ ಆಲೋಚನೆಯೊಂದಿಗೆ ಮುಂದೆ ಬಂದಿರುವುದು ಸಮಯೋಚಿತವಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಇಲಾಖೆಯಲ್ಲಿ ಲಭ್ಯವಿರುವ ಎಸ್‍ಸಿ ಮತ್ತು ಎಸ್‍ಟಿ ಯೋಜನೆಗಳ ಕುರಿತು ತರಬೇತುದಾರರಿಗೆ ಮಾಹಿತಿ ನೀಡಿ, ತರಬೇತಿ ಪಡೆದ ಯುವಕರಿಗೆ ನಿಗಮದಿಂದ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.
ಐಸಿಎಆರ್-ಸಿಪಿಸಿಆರ್‍ಐ ನಿದೆಸಕ ಡಾ.ಕೆ.ಬಿ.ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಸಿಪಿಸಿಆರ್‍ಐನಿಂದ ಲಭಿಸುವ ಸೌಲಭ್ಯಗಳನ್ನು ಬಳಸಿಕೊಂಡು ತೆಂಗಿನ ಕೃಷಿಯಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿ ಜೀವನಮಟ್ಟ ಸುಧಾರಿಸಿಕೊಲ್ಳುವಂತೆ ಸಲಹೆ ನೀಡಿದರು.
ಟಿಎಸ್‍ಪಿ ಯೋಜನೆಗಳ ವಿಜ್ಞಾನಿ ಮತ್ತು ನೋಡಲ್ ಅಧಿಕಾರಿ ಡಾ. ಕೆ.ಶಂಸುದ್ದೀನ್ ಸ್ವಾಗತಿಸಿದರು. ಐಸಿಎಆರ್-ಸಿಪಿಸಿಆರ್‍ಐನ ನ ಎಸ್‍ಸಿಎಸ್‍ಪಿ ಯೋಜನೆಗಳ ಹಿರಿಯ ವಿಜ್ಞಾನಿ ಮತ್ತು ನೋಡಲ್ ಅಧಿಕಾರಿ ಡಾ. ರಾಜ್‍ಕುಮಾರ್ ವಂದಿಸಿದರು.