ನವದೆಹಲಿ: ಸಾಮಾಜಿಕ ಮಾಧ್ಯಮಗಳು ಹಾಗೂ ಒಟಿಟಿ ವೇದಿಕೆಗಳನಿಯಂತ್ರಣಕ್ಕೆ ರೂಪಿಸಿರುವ ನೀತಿಯು, ಈ ವೇದಿಕೆಗಳಲ್ಲಿ ಅಶ್ಲೀಲ ಮತ್ತು ಧರ್ಮನಿಂದನೆಯ ಭಾಷೆ ಬಳಕೆ ತಡೆಯಲು ಅಗತ್ಯವಿರುವ ನಿಯಮಗಳನ್ನು ಒಳಗೊಂಡಿರಲಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಈ ವಿಚಾರವಾಗಿ ಈ ಮೊದಲು ಹೈಕೋರ್ಟ್ ನೀಡಿದ್ದ ನಿರ್ದೇಶನಗಳ ಪಾಲನೆಗೆ ಸಂಬಂಧಿಸಿ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ವಿಷಯ ತಿಳಿಸಿದೆ.
ತನ್ನ ಆದೇಶಗಳ ಪಾಲನೆ ಸೇರಿದಂತೆ ವಿಷಯಕ್ಕೆ ಸಂಬಂಧಿಸಿ ಸಚಿವಾಲಯ ಸಲ್ಲಿಸಿದ ಪ್ರಮಾಣಪತ್ರ ಕುರಿತು ತೃಪ್ತಿ ವ್ಯಕ್ತಪಡಿಸಿದ ಹೈಕೋರ್ಟ್ ಅರ್ಜಿ ವಿಲೇವಾರಿ ಮಾಡಿತು.
ಈ ವಿಚಾರವಾಗಿ, ಈ ಹಿಂದೆ ಆದೇಶ ಹೊರಡಿಸಿದ್ದ ಹೈಕೋರ್ಟ್, ಸಾಮಾಜಿಕ ಮಾಧ್ಯಮ ಮತ್ತು ಒಟಿಟಿ ವೇದಿಕೆಗಳಲ್ಲಿ ಹಂಚಿಕೊಳ್ಳುವ/ಪ್ರಸಾರವಾಗು ವಿಷಯವಸ್ತುಗಳ ನಿಯಂತ್ರಣಕ್ಕಾಗಿ ನಿಯಮಗಳು ಹಾಗೂ ಮಾರ್ಗಸೂಚಿಗಳ ರಚನೆ ಬಗ್ಗೆ ತುರ್ತು ಗಮನ ಅಗತ್ಯ ಎಂದು ಹೇಳಿತ್ತು.
'ಸಾಮಾಜಿಕ ಮಾಧ್ಯಮಗಳು ಹಾಗೂ ಒಟಿಟಿಗಳಂತಹ ವೇದಿಕೆಗಳು ಈಗ ಮಕ್ಕಳಿಗೂ ಮುಕ್ತವಾಗಿವೆ. ಇವುಗಳಲ್ಲಿ ಅಶ್ಲೀಲ ಭಾಷೆ ಬಳಕೆಯನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ' ಎಂದೂ ಹೈಕೋರ್ಟ್ ಹೇಳಿತ್ತು.