ಚೆನ್ನೈ: ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ಬಿಡುಗಡೆಯಾದ ದಿನದಿಂದಲೂ ಬಾಕ್ಸ್ಆಫೀಸ್ನಲ್ಲಿ ಸದ್ದು ಮಾಡುತ್ತಿದ್ದು, 10 ದಿನಗಳಲ್ಲಿ ಸಿನಿಮಾ 400ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸುತ್ತಿದೆ.
ಚೆನ್ನೈ: ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ಬಿಡುಗಡೆಯಾದ ದಿನದಿಂದಲೂ ಬಾಕ್ಸ್ಆಫೀಸ್ನಲ್ಲಿ ಸದ್ದು ಮಾಡುತ್ತಿದ್ದು, 10 ದಿನಗಳಲ್ಲಿ ಸಿನಿಮಾ 400ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸುತ್ತಿದೆ.
ಇದೀಗ ಜೈಲರ್ ಚಿತ್ರಕ್ಕೆ ಸಂಕಷ್ಟ ಒಂದು ಎದುರಾಗಿದ್ದು ಸಿನಿಮಾದ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಯೊಂದು ಸಲ್ಲಿಕೆಯಾಗಿದೆ.
ಅರ್ಜಿಯಲ್ಲೇನಿದೆ
ರಜಿನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಘರ್ಷಣೆ ಹೆಚ್ಚಿದ್ದು, ಈ ಸಿನಿಮಾಗೆ ಸೆನ್ಸಾರ್ ಬೋರ್ಡ್ U/A ಸರ್ಟಿಫಿಕೆಟ್ ನೀಡಿದೆ. ಚಿತ್ರದಲ್ಲಿ ಬಹಳಷ್ಟು ಹಿಂಸಾತ್ಮಕ ದೃಶ್ಯಗಳಿದ್ದು, ಯಾವ ಆಧಾರದ ಮೇಲೆ ಸೆನ್ಸಾರ್ ಬೋರ್ಡ್ U/A ಸರ್ಟಿಫಿಕೇಟ್ ನೀಡಿದೆ. ಈ ಕೂಡಲೇ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕು.
ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ತಪ್ಪಾಗಿ ಸರ್ಟಿಫಿಕೇಟ್ ನೀಡಿದ್ದು, 12 ವರ್ಷ ಹಾಗೂ ಅದರ ಕೆಳಗಿನ ವಯಸ್ಸಿನ ಮಕ್ಕಳು ಈ ಚಿತ್ರವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಚಿತ್ರದಲ್ಲಿ ಘರ್ಷಣೆ ಹಾಗೂ ರಕ್ತಪಾತದ ದೃಶ್ಯಗಳಿದ್ದು, U/A ಸರ್ಟಿಫಿಕೇಟ್ ನೀಡುವಂತಿಲ್ಲ. ಕೂಡಲೇ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.