ಮಂಜೇಶ್ವರ: ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿ ಮೀಂಜ ಮತ್ತು ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು. ಸುಂಕದಕಟ್ಟೆಯಿಂದ ಹೊರಟ ಮೆರವಣಿಗೆ ಮಜೀರ್ ಪಳ್ಳದಲ್ಲಿ ಸಮಾಪ್ತಿಗೊಂಡಿತು.
ರಾಹುಲ್ ಗಾಂಧಿಯವರಿಗೆದುರಾಗಿ ಹೈಕೋರ್ಟ್ ನೀಡಿದ ತೀರ್ಪಿಗೆದುರಾಗಿ ಸುಪ್ರೀಂಕೋರ್ಟು ತಡೆಯಾಜ್ಞೆ ನೀಡಿರುವುದು ಸಂತಸ ತಂದಿದೆ. ರಾಹುಲ್ ಗಾಂಧಿಯವರ ಜನಪ್ರಿಯತೆಯನ್ನು ಕುಗ್ಗಿಸಲು ಕೇಂದ್ರ ಸರ್ಕಾರ ಮಾಡಿದ ಕುತಂತ್ರ ಅವರಿಗೇ ತಿರುಗೇಟಾಗಿದೆ. ಈ ತೀರ್ಪು ಸತ್ಯ ಮತ್ತು ನ್ಯಾಯಕ್ಕೆ ಸಿಕ್ಕಿದ ವಿಜಯವಾಗಿದೆ ಎಂದು ಸಭೆಯನ್ನು ಉದ್ಘಾಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಪಿ. ಸೋಮಪ್ಪ ಹೇಳಿದರು.
ಮೀಂಜ ಮಂಡಲಾಧ್ಯಕ್ಷ ಇಕ್ಬಾಲ್ ಕಳಿಯೂರು ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮಾಜಿ ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಡಿಎಂಕೆ ಮೊಹಮ್ಮದ್, ನೇತಾರರಾದ ಮೊಹಮ್ಮದ್ ಪಾವೂರು, ಮಜೀದ್ ಪಿ ಬಿ, ಉಮರಬ್ಬ ಆನೆಕಲ್ಲು, ಮೊಹಮ್ಮದ್ ಮಜಲ್, ದಿವಾಕರ್ ಎಸ್.ಜೆ, ಮೂಸಾ ಡಿ.ಕೆ, ಸದಾಶಿವ ಕೆ, ರಜತ್ ವೇಗಸ್, ಅಝೀಝ್ ಕಲ್ಲೂರ್, ಹಮೀದ್ ಕಣಿಯೂರ್, ಲತೀಫ್ ಅಡ್ಕತ್ತಗುರಿ, ರಝಾಕ್ ಹಾಜಿ ಮೊರತ್ತಣೆ, ಅಬೂಬಕ್ಕರ್ ಧರ್ಮನಗರ, ಮೊಯ್ದಿನ್ ಕುಂಞ ಮೊದಲಾದವರು ಮಾತನಾಡಿದರು.