ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಗತ್ತಿನಾದ್ಯಂತ ಇರುವ ಕೇರಳೀಯರಿಗೆ ಶುಭ ಹಾರೈಸಿದ್ದಾರೆ. ಓಣಂ ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತೀಕವೂ ಆಗಿದೆ ಎಂದು ರಾಷ್ಟ್ರಪತಿಗಳು ಬಣ್ಣಿಸಿದ್ದಾರೆ.
ಓಣಂ ಸಾಮಾಜಿಕ ಸಾಮರಸ್ಯದ ಹಬ್ಬವಾಗಿದ್ದು, ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಆಚರಿಸುತ್ತಾರೆ. ಓಣಂ ಆಚರಣೆಗಳು ಸಹೋದರತ್ವವನ್ನು ಹರಡಲು ಮತ್ತು ಪ್ರಗತಿಗೆ ಕಾರಣವಾಗಲಿ ಎಂದು ಅವರು ಹಾರೈಸಿದರು.
'ಓಣಂ ಹಬ್ಬದ ಶುಭ ಸಂದರ್ಭದಲ್ಲಿ ನಮ್ಮ ದೇಶದ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ಓಣಂ ಏಕತೆ, ಸುಗ್ಗಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಆಚರಣೆಯಾಗಿದೆ.ಇದು ಸಮಾಜವನ್ನು ಸಂಪ್ರದಾಯದ ಎಳೆಗಳಿಂದ ಬಂಧಿಸುತ್ತದೆ. ನಮ್ಮ ರೈತ ಸಮುದಾಯದ ದಣಿವರಿಯದ ಪ್ರಯತ್ನಗಳನ್ನು ಗೌರವಿಸಲು ಮತ್ತು ಆಶೀರ್ವಾದಕ್ಕಾಗಿ ಪ್ರಕೃತಿ ಮಾತೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಇದು ಒಂದು ಸಂದರ್ಭವಾಗಿದೆ. ಓಣಂನ ಉತ್ಸಾಹವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ರಾಷ್ಟ್ರಪತಿಗಳು ಶುಭ ನುಡಿದಿರುವರು.