ಮಂಜೇಶ್ವರ: ಗಡಿನಾಡಿನಲ್ಲಿ ಕನ್ನಡ ಭಾಷೆಯ ರಕ್ಷಣೆ ಜತೆಗೆ ಸಂಸ್ಕøತಿಯ ಪೋಷಣೆಗೆ ಹೆಚ್ಚಿನ ಅದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ನಿಕಟಪೂರ್ವ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ಅವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತಲಪ್ಪಾಡಿಯ ವಿಶ್ವಾಸ್ ಆಡಿಟೋರಿಯಂನಲ್ಲಿ ನಡೆದ 'ಗಡಿನಾಡ ಕನ್ನಡ ಉತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಕನ್ನಡ ಮಧ್ಯಮ ಶಾಲೆಗಳು ಮುಚ್ಚುಗಡೆಯಾಗದಂತೆ ಜಾಗೃತಿ ಮೂಡಿಸುವಲ್ಲಿ ಕನ್ನಡಿಗರು ಮುಂಚೂಣಿ ನೇತೃತ್ವ ವಹಿಸಬೇಕು ಎಂದು ತಿಳಿಸಿದರು.
ನ್ಯಾಯಾಲಯ ತೀರ್ಪು ಸ್ವಾಗತಾರ್ಹ:
ಕನ್ನಡ ಬಾರದ ಅಧ್ಯಾಪಕರನ್ನು ಯಾವುದೇ ಮಾತ್ರಕ್ಕೂ ಕನ್ನಡ ಬೋಧನೆಗೆ ನೇಮಿಸಿಕೊಳ್ಳದಂತೆ ಹಾಗೂ ಓಣಂ ರಜೆ ನಂತರ ಕನ್ನಡ ಅಧ್ಯಾಪಕರನ್ನು ಇಲ್ಲಿ ನೇಮಿಸಿಕೊಳ್ಳುವಂತೆ ಕೇರಳದ ಉಚ್ಛ ನ್ಯಾಯಾಲಯ ನೀಡಿರುವ ಆದೇಶ ಕನ್ನಡಿಗರಲ್ಲಿ ಭರವಸೆಗೆ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳು ಅನುಭವಿಸಿಕೊಂಡು ಬರುತ್ತಿರುವ ಸಮಸ್ಯೆಗೆ ನ್ಯಾಯಾಲಯದ ಈ ಆದೇಶ ಹುರುಪನ್ನು ತಂದುಕೊಟ್ಟಿದೆ. ಕನ್ನಡದ ಗೌರವವನ್ನು ಎತ್ತಿ ಹಿಡಿದಿರುವ ನ್ಯಾಯಾಲಯzವೀ ತೀರ್ಪು ಸ್ವಾಗತಾರ್ಹ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಹೋರಾಟ:
ಗಡಿನಾಡ ಕನ್ನಡಿಗರಿಗಾಗುತ್ತಿರುವ ಅನ್ಯಾಯದ ವಿರುದ್ಧ ವಿಧಾನಸಭೆಯೊಳಗೆ ಹಾಗೂ ಹೊರಗೆ ನಿರಂತರ ಧ್ವನಿಯೆತ್ತುತ್ತ ಬಂದಿದ್ದು, ಇದನ್ನು ಮುಂದುವರಿಸುವುದಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ. ಅವರು ಸಮಾರಂಭದಲ್ಲಿ ವಿಶೇಷ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು. ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ತರಗತಿಗೆ ಸೇರ್ಪಡೆಗೊಳಿಸುವುದರ ಜತೆಗೆ ಕನ್ನಡದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಕನ್ನಡದ ಬೆಳವಣಿಗೆಗೆ ಸಹಕಾರಿಗಳಾಗಬೇಕು. ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕಾತಿ ವಿರುದ್ಧ ನ್ಯಾಯಾಲಯ ನೀಡಿರುವ ತೀರ್ಪು ಕನ್ನಡಿಗರ ಹೋರಾಟಕ್ಕೆ ಲಭಿಸಿದ ಗೆಲುವಾಗಿದೆ. ಈ ಆದೆಶದಿಂದ ಮೈಮರೆಯದೆ, ಕನ್ನಡದ ಮೇಲಾಗುವ ದೌರ್ಜನ್ಯ ವಿರುದ್ಧ ನಿರಂತರ ಹೋರಾಟ ನಡೆಸುವ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ದ.ಕ ಜಿಲ್ಲಾ ಘಟಕ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ, ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಷಿ ಆಶಯ ಭಾಷಣ ಮಾಡಿ, ಸರ್ಕಾರಿ ಶಾಲೆಗಳಿಗಿಂತ ಅನುದಾನಿತ ಶಾಲೆಗಳು ಇಂದು ಹೆಚ್ಚು ಸಂಕಷ್ಟ ಎದುರಿಸುತ್ತಿದೆ. ಶೈಕ್ಷಣಿಕ ವಲಯಕ್ಕೆ ಹೆಚ್ಚಿನ ಅನುದಾನ ಮಂಜೂರಾದಾಗ ಮಾತ್ರ ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ತಿಳಿಸಿದರು. ಗಡಿನಾಡು ಎಲ್ಲ ಭಾಷೆಗಳ ಸಮ್ಮಿಳಿತ ಪ್ರದೇಶವಾಗಿದೆ. ಇಲ್ಲಿನ ಬಹುಭಾಷೆಗಳ ಮಧ್ಯೆ ಜಗತ್ತನ್ನು ಅರ್ಥಮಾಡಿಕೊಳ್ಳುವ ಭಾವನೆಗಳೂ ವಿಶಾಲವಾಗಿರುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ದ.ಕ ಜಿಲ್ಲ ನಿದೆಸಕ ರಾಜೇಶ್ ಜಿ, ಸಯ್ಯದ್ ಯು.ಕೆ ಸೈಫುಲ್ಲ ತಙಳ್, ತಲಪ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ ಭಟ್, ಗಡಿನಡ ಕನ್ನಡ ಉತ್ಸವ ಸಮಿತಿ ಗೌರವಾಧ್ಯಕ್ಷ ಅರಿಬೈಲು ಗೋಪಾಲ ಶೆಟ್ಟಿ, ದ.ಕ ಜಿಲ್ಲಾ ಕಸಪ ನಿಕಟಪೂರ್ವ ಅದ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉತ್ಸವ ಸಮಿತಿ ಪದದಿಕಾರಿಗಳು, ದ.ಕ ಜಿಲ್ಲ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಡಾ. ಧನಂಜಯ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ವಿನಯ ಆಚಾರ್ಯ ಎಚ್. ವಂದಿಸಿದರು.
ಈ ಸಂದರ್ಭ ನಡೆದ 'ಗಡಿನಾಡಿದ ಸಮಸ್ಯೆ-ಸವಾಲುಗಳು'ವಿಚಾರಗೋಷ್ಠಿಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ವಿಷಯದಲ್ಲಿ ಕಾರ್ತಿಕ್ ಪಡ್ರೆ, ಭಾಷೆ ವಿಷಯಕ್ಕೆ ಸಂಬಂಧಿಸಿ ಡಾ. ರತ್ನಾಕರ ಮಲ್ಲಮೂಲೆ ವಿಷಯ ಮಂಡಿಸಿದರು. ವಿಜಯಲಕ್ಷ್ಮೀ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು. ರವಿ ನಾಯ್ಕಾಪು ವಂದಿಸಿದರು.