ನವದೆಹಲಿ: ಮುಂಬೈ-ದೆಹಲಿ ಎಕ್ಸ್‌ಪ್ರೆಸ್ ವೇನ ಸೋಹ್ನಾ-ದೌಸಾ ನಡುವಿನ 246 ಕಿ.ಮೀ ಉದ್ದದ ಮಾರ್ಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಸುರಕ್ಷತೆ ಕುರಿತು ಅಧ್ಯಯನ ನಡೆಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.

ಆರು ತಿಂಗಳ ಅವಧಿಯಲ್ಲಿ 150 ಅಪಘಾತಗಳಿಗೆ ಈ ಮಾರ್ಗ ಸಾಕ್ಷಿಯಾಗಿದೆ. ಭಾನುವಾರ ರೋಲ್ಸ್ ರಾಯ್ಸ್ ಹಾಗೂ ತೈಲ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತ ದೊಡ್ಡ ಸುದ್ದಿಯಾಗಿತ್ತು.
ಹೆದ್ದಾರಿ ನಿರ್ಮಾಣದ ಸ್ವರೂಪ, ಪ್ರವೇಶ ಮತ್ತು ನಿರ್ಗಮನ ಸ್ಥಳ, ದ್ವಿಮುಖ ಮಾರ್ಗ, ನಿಲುಗಡೆ ಸ್ಥಳಗಳು ಸೇರಿದಂತೆ ಇತರೇ ಮೂಲ ಸೌಕರ್ಯ ಆಧರಿಸಿ ಐಐಟಿ ಮೂಲಕ ಅಧ್ಯಯನ ನಡೆಸಲು ಚಿಂತನೆ ನಡೆಸಲಾಗಿದೆ
ಫೆಬ್ರುವರಿ 15ರಂದು ಸಾರ್ವಜನಿಕರ ಬಳಕೆಗೆ ಈ ಮಾರ್ಗವನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಪ್ರತಿದಿನ ಈ ಮಾರ್ಗದಲ್ಲಿ 25 ಸಾವಿರದಿಂದ 28 ಸಾವಿರ ವಾಹನಗಳು ಸಂಚರಿಸುತ್ತವೆ. ಜೊತೆಗೆ, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಚಾಲನೆಗೆ ಸಂಬಂಧಿಸಿದಂತೆ ಪ್ರಯಾಣಿಕರ ಅಭಿಪ್ರಾಯವನ್ನೂ ಪಡೆಯಲು ನಿರ್ಧರಿಸಲಾಗಿದೆ. ಇದರ ಆಧಾರದ ಮೇಲೆ ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಮಣ್ಣಿನ ವ್ಯತ್ಯಾಸದಿಂದ ಹೆದ್ದಾರಿಯ ಕೆಲವಡೆ ದೋಷಗಳು ಕಂಡುಬಂದಿವೆ. ಇದರಿಂದ ಕೆಲವೆಡೆ ಹೆದ್ದಾರಿಯ ಮೇಲ್ಮೈ ಕುಸಿದಿದೆ. ಇದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.