ನವದೆಹಲಿ: ಕುಳಿ ತುಂಬಿದ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಂಚರಿಸಲು ಸಿದ್ಧವಾಗಿರುವ ಪ್ರಗ್ಯಾನ್ ರೋವರ್‌ಗೆ ಚಂದ್ರನ ನೆಲದಲ್ಲಿ ಹಾದಿ ತೋರಲಿರುವ (ನ್ಯಾವಿಗೇಟ್) ಕಣ್ಣುಗಳಿಗೆ ನೋಯ್ಡಾ ಮೂಲದ ಟೆಕ್ ಸ್ಟಾರ್ಟ್ ಅಪ್ ಓಮ್ನಿಪ್ರೆಸೆಂಟ್ ರೋಬೋಟ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಶಕ್ತಿ ತುಂಬಿದೆ.
ನವದೆಹಲಿ: ಕುಳಿ ತುಂಬಿದ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಂಚರಿಸಲು ಸಿದ್ಧವಾಗಿರುವ ಪ್ರಗ್ಯಾನ್ ರೋವರ್‌ಗೆ ಚಂದ್ರನ ನೆಲದಲ್ಲಿ ಹಾದಿ ತೋರಲಿರುವ (ನ್ಯಾವಿಗೇಟ್) ಕಣ್ಣುಗಳಿಗೆ ನೋಯ್ಡಾ ಮೂಲದ ಟೆಕ್ ಸ್ಟಾರ್ಟ್ ಅಪ್ ಓಮ್ನಿಪ್ರೆಸೆಂಟ್ ರೋಬೋಟ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಶಕ್ತಿ ತುಂಬಿದೆ.
ಇಸ್ರೊದೊಂದಿಗೆ ಚಂದ್ರಯಾನ ಸರಣಿಯಲ್ಲಿ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಓಮ್ನಿಪ್ರೆಸೆಂಟ್ ರೋಬೋಟ್ ಟೆಕ್ನಾಲಜೀಸ್, ಬುಧವಾರ ಸಂಜೆ ಚಂದ್ರನ ಮೇಲೆ ಸ್ಪರ್ಶಿಸಿದ ವಿಕ್ರಮ್ ಲ್ಯಾಂಡಿಂಗ್ ಮಾಡ್ಯೂಲ್‌ನಲ್ಲಿ ಇರಿಸಲಾಗಿರುವ ಪ್ರಗ್ಯಾನ್ ರೋವರ್‌ಗಾಗಿ ಪರ್ಸೆಪ್ಶನ್ ನ್ಯಾವಿಗೇಷನ್ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿಕೊಟ್ಟಿದೆ.
'ನಮ್ಮ ಸಾಫ್ಟ್‌ವೇರ್ ಬಳಸಿಕೊಂಡು ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ನ್ಯಾವಿಗೇಟ್ ಮಾಡುವುದನ್ನು ನೋಡಲು ನಾವು ತುಂಬಾ ಉತ್ಸುಕರಾಗಿದ್ದೇವೆ' ಎಂದು ಓಮ್ನಿಪ್ರೆಸೆಂಟ್ ರೋಬೋಟ್ ಟೆಕ್ನಾಲಜೀಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಶಿವ ನಾಡರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಆಕಾಶ್ ಸಿನ್ಹಾ ತಿಳಿಸಿದರು.
'ನಮ್ಮ ಈ ಸಾಫ್ಟ್‌ವೇರ್ ರೋವರ್‌ನಲ್ಲಿ ಅಂತರ್ನಿರ್ಮಿತವಾಗಿದೆ. ಈ ಸಾಫ್ಟ್‌ವೇರ್ ಲೂನಾರ್ ರೋವರ್‌ನ ಎರಡು ಕ್ಯಾಮೆರಾಗಳನ್ನು ಬಳಸಿ ಚಂದ್ರನ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಚಂದ್ರನ ಭೂದೃಶ್ಯದ 3ಡಿ ನಕ್ಷೆ ರಚಿಸಲು ಅವುಗಳನ್ನು ಒಟ್ಟಿಗೆ ಜೋಡಿಸುತ್ತದೆ. ಇಮೇಜ್ ಪ್ರೊಸೆಸಿಂಗ್ ಅನ್ನು ಬಾಹ್ಯಾಕಾಶ ನೌಕೆಯಲ್ಲಿ ಮಾಡಲಾಗುತ್ತದೆ. ಅಂತಿಮ 3ಡಿ ಮಾದರಿಯನ್ನು ಮತ್ತೆ ಮಿಷನ್ ಕಂಟ್ರೋಲ್‌ಗೆ ರವಾನಿಸಲಿದೆ' ಎಂದು ಅವರು ಹೇಳಿದರು.
'ಈ ಸಾಫ್ಟ್‌ವೇರ್ ಅನ್ನು ಮೂಲತಃ ಚಂದ್ರಯಾನ-2 ಗಾಗಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಆಗ, ರೋವರ್ ಇಳಿಸಲು ಸಾಧ್ಯವಾಗಲಿಲ್ಲ. ಈಗ ಚಂದ್ರಯಾನ -3ರಲ್ಲಿ ಅದನ್ನು ಬಳಸಲಾಗುತ್ತಿದೆ. ಪ್ರಗ್ಯಾನ್ ರೋವರ್‌ನಲ್ಲಿ ಕಣ್ಣುಗಳಂತೆ ಕಾರ್ಯನಿರ್ವಹಿಸುವ ಕೇವಲ ಎರಡು ದುಬಾರಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಈ ಎರಡು ಕಣ್ಣುಗಳಿಂದ ಚಂದ್ರನ ಸುತ್ತ ತನ್ನ ಪಥವನ್ನು ಪ್ರಗ್ಯಾನ್ ಕಂಡುಕೊಳ್ಳಲಿದೆ' ಎಂದು ಸಿನ್ಹಾ ಹೇಳಿದರು.