ಬೆಂಗಳೂರು: ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಮುಂದಿನ ಯೋಜನೆ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್ ವಿವರಣೆ ನೀಡಿದ್ದಾರೆ.
ಬೆಂಗಳೂರು: ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಮುಂದಿನ ಯೋಜನೆ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್ ವಿವರಣೆ ನೀಡಿದ್ದಾರೆ.
ಗಗನಯಾನ ಯೋಜನೆ ಇನ್ನೂ ಪ್ರಗತಿಯಲ್ಲಿದೆ. 2025ರ ವೇಳೆಗೆ ಮಾನವಸಹಿತ ಕಾರ್ಯಾಚರಣೆ ಮಾಡುವ ಗುರಿ ಹೊಂದಿದ್ದೇವೆ. ಇದಕ್ಕೂ ಮೊದಲು ಅನೇಕ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಬೇಕಿದೆ ಎಂದು ಹೇಳಿದ್ದಾರೆ.
ಚಂದ್ರಯಾನ-3 ಯೋಜನೆ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕ್ಷಣವನ್ನು ವಿವರಿಸಲಾಗದು. ಸಾಫ್ಟ್ ಲ್ಯಾಂಡಿಂಗ್ ಸವಾಲಿನಿಂದ ಕೂಡಿತ್ತು. ಈ ಯೋಜನೆಯ ಯಶಸ್ಸಿಗಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಪ್ರಗ್ಯಾನ್ ರೋವರ್ ಎರಡು ಉಪಕರಣಗಳನ್ನು ಹೊಂದಿದೆ. ಇವೆರಡು ಚಂದ್ರನ ಮೇಲ್ಮೈಯಲ್ಲಿ ಧಾತುರೂಪದ ಸಂಯೋಜನೆಯ ಸಂಶೋಧನೆ ಮತ್ತು ರಾಸಾಯನಿಕ ಸಂಯೋಜನೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದರು.