ತಿರುವನಂತಪುರ: ಶಾಲೆಗಳಲ್ಲಿ ದೈಹಿಕ ಶಿಕ್ಷಣದ (ಪಿಇ) ಮಹತ್ವವನ್ನು ಸಾರುವ ನಿಟ್ಟಿನಲ್ಲಿ ರಾಜ್ಯ ಸÀರ್ಕಾರ ಜುಲೈ 19ರಂದು ಸುತ್ತೋಲೆ ಹೊರಡಿಸಿದ್ದು, ದೈಹಿಕ ಶಿಕ್ಷಣ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಿದೆ. ಪಿಇ ತರಗತಿಗಳ ಸಮಯವನ್ನು ಇತರ ಪಠ್ಯ ಬೋಧನೆಗೆ ಬಳಸಬಾರದು ಎಂದು ಆದೇಶವು ಸ್ಪಷ್ಟವಾಗಿ ಹೇಳಿದೆ. ಇದು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಯೋಗಕ್ಷೇಮ ಮತ್ತು ಫಿಟ್‍ನೆಸ್ ಅನ್ನು ಉತ್ತೇಜಿಸಲು ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಆದರೂ, ಒಂದು ಗೊಂದಲಮಯ ಪ್ರಶ್ನೆ ಎದುರಾಗಿದೆ. ಈ ದೈಹಿಕ ಶಿಕ್ಷಣ ತರಗತಿಗಳನ್ನು ಯಾರು ನಡೆಸುತ್ತಾರೆ? ಈ ಪ್ರಶ್ನೆಯು ರಾಜ್ಯದ ಹಲವಾರು ಶಾಲೆಗಳಲ್ಲಿ ಪ್ರತಿಧ್ವನಿಸುತ್ತದೆ, ಏಕೆಂದರೆ ಸರ್ಕಾರವು ಇನ್ನೂ ತನ್ನ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು (ಪಿಇಟಿ) ನೇಮಿಸಿಲ್ಲ.
ಪಿಇಟಿ(ಫಿಸಿಕಲ್ ಎಜ್ಯುಕೇಶನ್ ಟೀಚರ್) ಇಲ್ಲದಿರುವ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಈ ದುಸ್ಥಿತಿ ವಿಶೇಷವಾಗಿ ತೀವ್ರವಾಗಿದೆ. ಪ್ರಸ್ತುತ, ವಾರಕ್ಕೆ ನಿಗದಿಪಡಿಸಲಾದ ಎರಡು ದೈಹಿಕ ಶಿಕ್ಷಣ ತರಗತಿ ಅವಧಿಗಳನ್ನು ಸಾಮಾನ್ಯವಾಗಿ ಇತರ ಪಠ್ಯ ಬೋಧನೆಗೆ ಬಳಸಲಾಗುತ್ತದೆ. ಪ್ರಮುಖ ಪಠ್ಯಗಳಿಗೆ ಹೆಚ್ಚುವರಿ ಸಮಯದ ಅವಶ್ಯಕತೆಗಳನ್ನು ಸರಿಹೊಂದಿಸಲು ಇದು ನೆರವಾಗುತ್ತದೆÉ. ಹೊಸ ನಿರ್ದೇಶನದಂತೆ ಎಲ್ಲಾ ವಿಭಾಗಗಳಲ್ಲಿ ಪಿಇ ಅವಧಿಗಳನ್ನು ಕಡ್ಡಾಯವಾಗಿ ಸೇರಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಹೈಯರ್ ಸೆಕೆಂಡರಿ ಸ್ಕೂಲ್ (ಎಚ್‍ಎಸ್‍ಎಸ್) ವಿಭಾಗದಲ್ಲಿ ಯಾವುದೇ ಪಿಇಟಿಗಳನ್ನು ನೇಮಿಸಲಾಗಿಲ್ಲ ಎಂಬ ಅಂಶವನ್ನು ಸರ್ಕಾರವು ನಿರ್ಲಕ್ಷಿಸಿದೆ.
ರಾಜ್ಯದಲ್ಲಿ 4,504 ಸರ್ಕಾರಿ ಶಾಲೆಗಳು, 7,277 ಅನುದಾನಿತ ಶಾಲೆಗಳು ಮತ್ತು 863 ಅನುದಾನರಹಿತ ಶಾಲೆಗಳನ್ನು ಒಳಗೊಂಡಿರುವ 12,644 ಶಾಲೆಗಳಿವೆ. ಇವುಗಳಲ್ಲಿ 6,817 ಕೆಳ ಪ್ರಾಥಮಿಕ (ಎಲ್.ಪಿ) ಶಾಲೆಗಳು, 3,037 ಉನ್ನತ ಪ್ರಾಥಮಿಕ (ಯು.ಪಿ) ಶಾಲೆಗಳು ಮತ್ತು 2,790 ಪ್ರೌಢಶಾಲೆಗಳು (ಎಚ್.ಎಸ್)ಗಳಿದ್ದು, ಹೈಯರ್ ಸೆಕೆಂಡರಿ(ಎಚ್.ಎಸ್.ಎಸ್.) ಮಟ್ಟದಲ್ಲಿ, ಪ್ರಸ್ತುತ 1,907 ಸಂಸ್ಥೆಗಳು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಒಳಗೊಂಡಿವೆ. ದುರದೃಷ್ಟವಶಾತ್, ಈ ಶಾಲೆಗಳಲ್ಲಿ ಅರ್ಧದಷ್ಟು ಪಿಇಟಿ ಶಿಕ್ಷಕರ ಕೊರತೆಯಿದೆ.
ಶಿಕ್ಷಣ ಇಲಾಖೆಯ ಹಿಂದಿನ ನಿರ್ದೇಶನವು ಎಚ್‍ಎಸ್ ವಿಭಾಗದ ಪಿಇಟಿಗಳಿಗೆ ಯುಪಿ ತರಗತಿಗಳಿಗೆ ದೈಹಿಕ ಶಿಕ್ಷಣ ಬೋಧನೆಯನ್ನು ನೀಡಿತು. ಇದಕ್ಕಾಗಿ ಸರ್ಕಾರವು ಹೆಚ್ಚುವರಿ ವೇತನವಾಗಿ ತಿಂಗಳಿಗೆ ಅತ್ಯಲ್ಪ ರೂ 50 ಅನ್ನು ಮಂಜೂರು ಮಾಡಿತ್ತು. ಈ ಅಸಮರ್ಪಕ ಮೊತ್ತದಿಂದಾಗಿ, ಎಚ್‍ಎಸ್(ಹೈಸ್ಕೂಲು) ಶಿಕ್ಷಕರು ಯುಪಿ(ಹಿರಿಯ ಪ್ರಾಥಮಿಕ) ತರಗತಿಗಳಲ್ಲಿ ದೈಹಿಕ ಶಿಕ್ಷಣ ಬೋಧಿಸಲು ನಿರಾಕರಿಸಿದರು. ಸರ್ಕಾರದ ಶಿಕ್ಷಕರ ನೇಮಕಾತಿ ನೀತಿಯ ಪ್ರಕಾರ, 500 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳು ದೈಹಿಕ ಶಿಕ್ಷಕರನ್ನು ಹೊಂದಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ ವೃತ್ತಿಪರ ಶಿಕ್ಷಕರಿಲ್ಲದೆ ಶಾಲೆಯು ತಮ್ಮÁಟ ಬೋಧನೆಯ ತರಗತಿಗಳನ್ನು ಹೇಗೆ ನಡೆಸುತ್ತದೆ? ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ದೊಡ್ಡ ಶಾಲೆಗಳಿಗೆ ಮಾತ್ರ ಎರಡು ಪಿಇಟಿಗಳನ್ನು ನೀಡಲಾಗುತ್ತದೆ, ದುರದೃಷ್ಟವಶಾತ್, ಅಂತಹ ಅನೇಕ ಶಾಲೆಗಳು ಇನ್ನೂ ತಮ್ಮ ಪಿಇಟಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ.
ದೈಹಿಕ ಚಟುವಟಿಕೆಯ ಕೊರತೆಯು ಮಕ್ಕಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ಸತತವಾಗಿ ಗಮನಸೆಳೆದಿದ್ದಾರೆ. ಆದರೆ, ಸರ್ಕಾರದ ಭರವಸೆಗಳು ಸಾಮಾನ್ಯವಾಗಿ ಕಾಗದಕ್ಕೆ ಸೀಮಿತವಾಗಿರುತ್ತವೆ. ಹಲವಾರು ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅನೇಕ ದೈಹಿಕ ಚಟುವಟಿಕೆಗಳನ್ನು ಅಳವಡಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಮಕ್ಕಳ ದೈಹಿಕ ಬೆಳವಣಿಗೆಯ ಕಡೆಗೆ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅಭಿಮತ:
“ಪ್ರತಿ ವಾರ, ವಿದ್ಯಾರ್ಥಿಗಳಿಗೆ ಬಾಕಿ ಉಳಿದಿರುವ ಕೋರ್ಸ್‍ವರ್ಕ್ ಅನ್ನು ಸರಿದೂಗಿಸಲು ಕನಿಷ್ಠ ಎರಡು ಹೆಚ್ಚುವರಿ ಅವಧಿಗಳನ್ನು ನಿಗದಿಪಡಿಸುತ್ತೇವೆ. ಕಡ್ಡಾಯ ದೈಹಿಕ ಶಿಕ್ಷಣ ಅವಧಿಯನ್ನು ವೇಳಾಪಟ್ಟಿಯಿಂದ ಹೊರಗಿಡಲಾಗಿದೆ. ಎಚ್‍ಎಸ್‍ಎಸ್ ವಿಭಾಗದಲ್ಲಿ ಪಿಇಟಿಗಳು ಇಲ್ಲದಿರುವುದು ಬೇಸರ ತಂದಿದೆ. ರಾಜ್ಯದಲ್ಲಿನ ಎಚ್‍ಎಸ್ ಮತ್ತು ಎಲ್‍ಪಿ/ಯುಪಿ ಶಾಲೆಗಳು ಸಹ ಸಾಕಷ್ಟು ದೈಹಿಕ ಶಿಕ್ಷಕರಿಲ್ಲದೆ ಸಂಕಷ್ಟದಲ್ಲಿದ್ದು, ಸರ್ಕಾರಕ್ಕೆ ಸತತ ಮನವಿ ನೀಡಲಾಗುತ್ತಿದೆ.
-ಸೆಬಾಸ್ಟಿನ್ ಜಾನ್
ಅನುದಾನಿತ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ .