HEALTH TIPS

ಸ್ವಾತಂತ್ರ್ಯ ದಿನದಂದು ತ್ರಿವರ್ಣ ಪೇಟಗಳು ಮತ್ತು ಪೆನ್ನುಗಳು; ಕಾಸರಗೋಡು ಜಿಲ್ಲಾ ಕಾರಾಗೃಹದ ಕೈದಿಗಳ ಕೊಡುಗೆ

              ಕಾಸರಗೋಡು: ಕಾಸರಗೋಡು ಜಿಲ್ಲಾ ಕಾರಾಗೃಹದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅ0ಗವಾಗಿ ತ್ರಿವರ್ಣ ಧ್ವಜ ಮತ್ತು ಪೆನ್ನುಗಳನ್ನು ತಯಾರಿಸಿ ಮಾರಾಟಕ್ಕೆ ಸಿದ್ಧಪಡಿಸಿದ್ದು ಗಮನಾರ್ಹವಾಗಿತ್ತು. 

            ಜೈಲು ಕೈದಿಗಳು ರಾಷ್ಟ್ರಧ್ವಜದ ಬಣ್ಣದ ಪ್ಯಾಡ್‍ಗಳು ಮತ್ತು ಪೆನ್ನುಗಳನ್ನು ತಯಾರಿಸಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಈ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು.

           ಈ ಕರಕುಶಲತೆಯು 15 ಜೈಲು ಕೈದಿಗಳ ಎರಡು ವಾರಗಳ ಪ್ರಯತ್ನದ ಫಲಿತಾಂಶವಾಗಿದೆ. ವಾಹನಗಳ ಮೇಲೆ ನೇತು ಹಾಕಬಹುದಾದ ಸಣ್ಣ ಧ್ವಜಗಳನ್ನೂ ಕೈದಿಗ|ಳು ತಯಾರಿಸಿದ್ದರು. ಮುಖದ ಮೇಲೆ ಧರಿಸುವ ತ್ರಿವರ್ಣ ಟೊಪ್ಪಿಗೆ 70 ರೂ. ಪೆನ್ನುಗಳಿಗೆ 3  ರೂ.ಬೆಲೆ ನಿಗದಿಪಡಿಸಿ ವಿಕ್ರಯಿಸಲಾಗಿತ್ತು. ಜೈಲು ಆವರಣದಲ್ಲಿರುವ ತರಕಾರಿ ಕೃಷಿಯಿಂದ ಕೊಯ್ಲು ಮಾಡಿದ ಹಲಸು, ಮೆಣಸು, ಉದ್ದಿನಬೇಳೆಯ ಬೀಜಗಳನ್ನೊಳಗೊಂಡು ಪೆನ್ನು ತಯಾರಿಸಲಾಗಿದೆ. ಪೆನ್ನುಗಳ ಮೇಲೆ ನೋ ಟೂ ಡ್ರಗ್ಸ್ ಎಂಬ ಸಂದೇಶವನ್ನೂ ಮುದ್ರಿಸಲಾಗಿದೆ.

           ‘‘ಕರಕುಶಲ ವಸ್ತುಗಳನ್ನು ಉತ್ಪಾದಿಸುವ ಮೂಲಕ ಜೈಲು ಕೈದಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ಸಾಧ್ಯ. ಇದರಿಂದ ಜೈಲಿನಿಂದ ಹೊರಬಂದವರು ಈ ರೀತಿಯ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸಲು ಸಹಕಾರಿಯಾಗಲಿದ್ದು, ಬೇರೆ ಅಪರಾಧಗಳಿಗೆ ಆಸ್ಪದ ನೀಡದೆ ಸಮಾಜ ಹಾಗೂ ಕುಟುಂಬವನ್ನು ರಕ್ಷಿಸಬಹುದಾಗಿದೆ ಎಂದು ಪೋಲೀಸ್ ಅಧಿಕಾರಿ ತಿಳಿಸಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries