HEALTH TIPS

ಪ್ರಸಂಗಕರ್ತ, ಕಲಾವಿದ ಡಾ. ದಿನಕರ ಪಚ್ಚನಾಡಿ ಅವರಿಗೆ ಎಡನೀರು ಮಠದಲ್ಲಿ ಸನ್ಮಾನ

             ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಯಕ್ಷಗಾನ ಬಯಲಾಟ ಗುರುದಕ್ಷಿಣೆ (ಪಾಂಚಜನ್ಯ)ಯ ಪ್ರಸಂಗಕರ್ತ ಕಲಾವಿದ, ನಾಟ್ಯಗುರು ಡಾ. ದಿನಕರ ಪಚ್ಚನಾಡಿ ಅವರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವಾದ ಮಂತ್ರಾಕ್ಷತೆಗಳನ್ನಿತ್ತು ಹರಸಿದರು. 

          ಈ ಸಂದರ್ಭದಲ್ಲಿ ಡಾ. ದಿನಕರ ಪಚ್ಚನಾಡಿ ಮಾತನಾಡಿ ಪಾಂಚಜನ್ಯ ಪ್ರಸಂಗವು ಪೌರಾಣಿಕ ಹಿನ್ನೆಯಲ್ಲಿ ಜನರ ಜೀವನಕ್ಕೂ ಒಂದು ಪಾಠವಿರುವ ಕಥೆಯಾಗಿದೆ. ವೃತ್ತಿಯ ಜೊತೆ ಪ್ರವೃತ್ತಿ ಪ್ರತಿಯೊಬ್ಬನಲ್ಲೂ ಇರಬೇಕು. ಯಕ್ಷಗಾನವನ್ನು ನೋಡುತ್ತಾ ರಂಗದಲ್ಲಿ ಕುಣಿದು ಕುಪ್ಪಳಿಸಬೇಕು, ವೇಷಹಾಕಬೇಕು ಎಂಬ ವ್ಯಾಮೋಹ, ಹುಟ್ಟುಸಾವಿನ ಮಧ್ಯೆ ಏನಾದರೂ ಅಚ್ಚಳಿಯದ ದಾಖಲೆ ಉಳಿಯಬೇಕೆನ್ನುವ ಮಹದಾಸೆ ಮನದಲ್ಲಿತ್ತು. ಎಡನೀರು ಮೇಳದ ಮೂಲಕ ಪಾಂಚಜನ್ಯ ಪ್ರಸಂಗವು ಉತ್ತಮವಾಗಿ ಪ್ರಯೋಗವಾಗಿದೆ. ಕಲೆಯ ಸಂದೇಶ ತಿಳಿಯಬೇಕು. ಮಕ್ಕಳನ್ನು ಕಳೆದುಕೊಂಡರೆ ಮತ್ತೆ ಪಡೆದುಕೊಳ್ಳಲಾಗುವುದಿಲ್ಲ. ಆದರೆ ಇಲ್ಲಿ ಕೃಷ್ಣನ ಮೂಲಕ ಗುರುದಕ್ಷಿಣೆಯಾಗಿ ಪಡೆಯಲಾಯಿತು. ಬದುಕು ಜಂಜಾಟಕ್ಕೆ ಒಳಗಾಗಿ ಜರ್ಝರಿತವಾದಾಗ ನಾವು ತಾಳ್ಮೆಯಿಂದ ಹೇಗೆ ಬದುಕಬೇಕು? ಎಲ್ಲಿಯಾದರೂ ಆಯ ತಪ್ಪಿ ಆತ್ಮಹತ್ಯೆಗೆ ಶರಣಾದರೆ ಬದುಕು ಮುಗಿದು ಹೋಗುತ್ತದೆ. ಅದು ಆಗಬಾರದು. ಉದ್ವೇಗಕ್ಕೆ ಒಳಗಾಗಬಾರದು ಎಂಬ ಸಂದೇಶವಿಲ್ಲಿದೆ ಎಂದರು. 

         ಡಾ. ಶ್ರೀಪತಿ ಕಲ್ಲೂರಾಯ ನಿರೂಪಿಸಿದರು. ನಂತರ ಗುರುದಕ್ಷಿಣೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಭಾಗವತರಾಗಿ ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮದ್ದಳೆ ಚೈತನ್ಯಕೃಷ್ಣ ಪದ್ಯಾಣ, ಲವಕುಮಾರ ಐಲ, ಚಕ್ರತಾಳದಲ್ಲಿ ಶ್ರೀ ನಿಶ್ವತ್ ಜೋಗಿ, ಪಾತ್ರವರ್ಗದಲ್ಲಿ ಗಣೇಶ ಪಾಲೆಚ್ಚಾರು, ರವಿರಾಜ ಪನೆಯಾಲ, ಪೂಕಳ ಲಕ್ಷ್ಮೀನಾರಾಯಣ ಭಟ್, ಸಂಜಯ ಕುಮಾರ್ ಗೋಣಿಬೀಡು, ಲಕ್ಷ್ಮಣ ಕುಮಾರ್ ಮರಕಡ, ಶಶಿಧರ ಕುಲಾಲ್ ಕನ್ಯಾನ, ದಿನೇಶ ಕೋಡಪದವು, ಶಂಭಯ್ಯ ಭಟ್ ಕಂಜರ್ಪಣೆ ತಮ್ಮ ಪಾತ್ರಕ್ಕೆ ಜೀವ ತುಂಬಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries