ತಿರುವನಂತಪುರ: ವಿಧಾನಸೌಧದ ಸಿಬ್ಬಂದಿಗೆ ಓಣ ಭೋಜನ ಸಿದ್ಧಪಡಿಸಿದ ಸಭಾಧ್ಯಕ್ಷರಿಗೆ ಕೊನೆಗೂ ಊಟ ಸಿಗಲಿಲ್ಲ, ಕೂಟಕ್ಕೆ ಆಗಮಿಸಿದ ಸ್ಪೀಕರ್ ಎ.ಎನ್.ಶಂಸೀರ್ ಹಾಗೂ ಅವರ ಆಪ್ತ ಸಿಬ್ಬಂದಿಗೆ 20 ನಿಮಿಷ ಕಾದರೂ ಊಟ ಸಿಗಲಿಲ್ಲ.
ಅಂತಿಮವಾಗಿ ಸ್ಪೀಕರ್ ಮತ್ತು ಅವರ ತಂಡವು ಕೇವಲ ಸ್ಟ್ಯೂ ಮತ್ತು ಹಣ್ಣುಗಳನ್ನು ಸೇವಿಸಿ ಮರಳಿದರು. ಸರ್ಕಾರದ ವೆಚ್ಚದಲ್ಲಿ ಓಣಂ ಸದ್ಯ ಆಯೋಜಿಸಲಾಗಿತ್ತು.
1300 ಮಂದಿಗೆ ಸಿದ್ಧಪಡಿಸಿದ ಓಣಸದ್ಯ ಕೇವಲ 800 ಮಂದಿಗೆ ಮಾತ್ರ ಬಡಿಸಲಾಯಿತು. 400 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಮೊದಲ ಹಂತದಲ್ಲಿ ಎಲ್ಲರಿಗೂ ಪೂರ್ಣ ಊಟ ಬಡಿಸಲಾಯಿತು. ಎರಡನೇ ಹಂತÀದಲ್ಲಿ ಅರ್ಧ ಬಡಿಸಿದಾಗ ಮುಗಿದಿತ್ತು. ಇದೇ ವೇಳೆ ಸ್ಪೀಕರ್ ಮತ್ತು ಅವರ ತಂಡ ಆಗಮಿಸಿತು. ಅವರಿಗಾಗಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು, ಆದರೆ 20 ನಿಮಿಞ ಕಾದರೂ ಆಹಾರ ಬಂದಿರಲಿಲ್ಲ. ಬಳಿಕ ಸ್ಟ್ಯೂ ಮತ್ತು ಹಣ್ಣುಗಳನ್ನು ನೀಡಲಾಯಿತು. ಇದನ್ನು ಸೇವಿಸಿ ಬಳಿಕ ಸ್ಪೀಕರ್ ಮತ್ತು ಅವರ ತಂಡ ಮರಳಿದರು.
ತುಂಬಾ ತಡವಾಗಿ ಎರಡನೇ ಪಂಕ್ತಿಯಲ್ಲಿ ಕಾದು ಕುಳಿತಿದ್ದವರಿಗೆ ಊಟ ತಲುಪಿಸುವ ಹೊತ್ತಿಗೆ ಓಣಂ ಸದ್ಯ ಮುಗಿಯಿತು. ಹಬ್ಬದ ನಿರೀಕ್ಷೆಯಲ್ಲಿ ಬಂದಿದ್ದ ಹಲವರು ಪರೋಟ, ಚಪಾತಿ ತಿಂದು ಮೇಲದ್ದರು. ಅವ್ಯವಸ್ಥೆ ಕುರಿತು ತನಿಖೆ ನಡೆಸುವಂತೆ ಸ್ಪೀಕರ್ ಸೂಚಿಸಿದ್ದಾರೆ.