ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ಓಣಂ ಸಂಭ್ರಮಾಚರಣೆ ನಡೆಯಿತು. ಎಲ್‍ಕೆಜಿ ಯಿಂದ ಹತ್ತನೇ ತರತಿಯ ತನಕದ ವಿದ್ಯಾರ್ಥಿಗಳು ಅಧ್ಯಾಪಕ ವೃಂದ ಕೇರಳದ ಸಾಂಪ್ರದಾಯಿಕ ಉಡುಗೆಯೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪ್ರತೀ ತರಗತಿಯಲ್ಲಿ ಹೂವಿನ ರಂಗೋಲಿಯನ್ನು ರಚಿಸಲಾಗಿತ್ತು. ಮಧ್ಯಾಹ್ನ ಓಣಂ ವಿಶೇಷ ಔತಣಕೂಟ ನಡೆಯಿತು. ಮುಖ್ಯ ಶಿಕ್ಷಕ ಶ್ಯಾಂ ಭಟ್ ದರ್ಭೆಮಾರ್ಗ ಮಕ್ಕಳಿಗೆ ಹಿತವಚನಗಳನ್ನು ನುಡಿದರು. ಅಧ್ಯಾಪಕ ಬಾಲಕೃಷ್ಣ ಶರ್ಮ ಕೇರಳದಲ್ಲಿ ಓಣ ಆಚರಿಸುವ ಉದ್ದೇಶ, ಬಲಿಚಕ್ರವರ್ತಿ ಬಲೀಂದ್ರನಾಗಿ ಕೇರಳಕ್ಕೆ ಬರುವುದು, ಕೇರಳದ ಜನತೆ ಆ ದಿನವನ್ನು ಬಲೀಂದ್ರನನ್ನು ಸಂತಸದಿಂದ ಬರಮಾಡಿಕೊಳ್ಳುವುದನ್ನು ಸರಳವಾಗಿ ವಿವರಿಸಿದರು.