HEALTH TIPS

ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ವೇಳೆ ತೆಗೆದ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ

              ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯು ಚಂದ್ರಯಾನ -3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಕೆಲವೇ ನಿಮಿಷಗಳ ಮುನ್ನ ತೆಗೆದ ಚಿತ್ರಗಳನ್ನು ಬುಧವಾರ ಬಿಡುಗಡೆ ಮಾಡಿದೆ.

                ಚಂದ್ರಯಾನ-3 ರ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾದಿಂದ ಲ್ಯಾಂಡಿಂಗ್ ವೇಳೆ ತೆಗೆದ ಚಂದ್ರನ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.

                CH-3 ಲ್ಯಾಂಡರ್ ಮತ್ತು ಬೆಂಗಳೂರಿನ MOX-ISTRAC ನಡುವೆ ಸಂವಹನ ಸಂಪರ್ಕ ಸಾಧಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

                 ಚಂದ್ರಯಾನ 3 ಮಿಷನ್‌ನಲ್ಲಿ ದ್ವಿಮುಖ ಸಂವಹನ ಸೌಲಭ್ಯವಿದೆ. ಒಂದು ಚಂದ್ರಯಾನ 2 ಆರ್ಬಿಟರ್‌ನೊಂದಿಗೆ, ಎರಡನೆಯದು ನೇರವಾಗಿ ಇಸ್ರೋ ಕಮಾಂಡ್ ಸೆಂಟರ್‌ನೊಂದಿಗೆ ಸಂಪರ್ಕ ಹೊಂದಿದೆ.

              ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯನ್ನು ಸ್ಪರ್ಶಿಸಿದ ನಂತರ ವಿಕ್ರಮ್ ಲ್ಯಾಂಡರ್ ಹಂಚಿಕೊಂಡ ಮೊದಲ ಚಿತ್ರ ಇದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries