ನವದೆಹಲಿ: ಮುಂಬೈನಿಂದ 200 ಕಿ.ಮೀ.ದೂರದಲ್ಲಿ ಅರಬ್ಬಿ ಸಮುದ್ರದಲ್ಲಿದ್ದ ಹಡಗಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಚೀನಾದ ಪ್ರಜೆಯೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೆರವು ನೀಡುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಯಶಸ್ವಿಯಾಗಿದೆ.
ನವದೆಹಲಿ: ಮುಂಬೈನಿಂದ 200 ಕಿ.ಮೀ.ದೂರದಲ್ಲಿ ಅರಬ್ಬಿ ಸಮುದ್ರದಲ್ಲಿದ್ದ ಹಡಗಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಚೀನಾದ ಪ್ರಜೆಯೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೆರವು ನೀಡುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಯಶಸ್ವಿಯಾಗಿದೆ.
ಆಗಸ್ಟ್ 16-17ರ ನಡುವಿನ ಮಧ್ಯರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಯಿತು.
ರೋಗಿಯನ್ನು ಎಂಕೆ-III ವಿಮಾನ ಬಳಸಿ ಕರೆತಂದಿದ್ದು, ಪ್ರಾಥಮಿಕ ಚಿಕಿತ್ಸೆ ಒದಗಿಸಲಾಯಿತು. ಚೇತರಿಕೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಡಗಿನ ಮೇಲ್ವಿಚಾರಕರಿಗೆ ಒಪ್ಪಿಸಲಾಯಿತು. ಇದು, ಕಾವಲು ಪಡೆಯ ಬದ್ಧತೆಗೆ ನಿದರ್ಶನವಾಗಿದೆ ಎಂದು ತಿಳಿಸಿದೆ.