ಉಪ್ಪಳ: ಕೊಂಡೆವೂರು ಶ್ರೀಮಠದಲ್ಲಿ ಆ. 06 ರಂದು “ಕರ್ಕಾಟಕ ಮಾಸದ ಔಷಧೀಯ ಗಂಜಿ” ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಆಧುನಿಕ ಕಾಲಘಟ್ಟದಲ್ಲಿಯೂ ಪ್ರಸಿದ್ಧರಾಗಿರುವ ನಾಟಿವೈದ್ಯರುಗಳು ನಮ್ಮ ಶರೀರದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧೀಯ ವಸ್ತುಗಳು ಮತ್ತು ನಮ್ಮ ಪರಿಸರದಲ್ಲೇ ಬೆಳೆಯುವ ಗಿಡ, ಬಳ್ಳಿ, ಎಲೆ, ಹೂ ಇತ್ಯಾದಿಗಳನ್ನು ಬಳಸಿ ಗಂಜಿ ಮತ್ತು ಖಾದ್ಯ ಪದಾರ್ಥಗಳನ್ನು ತಯಾರಿಸಲಿದ್ದಾರೆ. ಅದರ ವಿತರಣೆ ಮತ್ತು ಖಾದ್ಯ ಪದಾರ್ಥಗಳ ಮಾಹಿತಿ ಶಿಬಿರ ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡಕೊಳ್ಳಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.