ಭೋಪಾಲ್: ಮಧ್ಯಪ್ರದೇಶ ಸರ್ಕಾರದ 2003ರಿಂದ 2023ರ ವರೆಗಿನ 'ರಿಪೋರ್ಟ್ ಕಾರ್ಡ್' ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಬಿಡುಗಡೆ ಮಾಡಿದ್ದು, 'ಬಿಜೆಪಿ ಆಡಳಿತವು ರಾಜ್ಯವನ್ನು ಬಿಮಾರು ರಾಜ್ಯಗಳ ಪಟ್ಟಿಯಿಂದ ಹೊರ ತಂದಿದೆ' ಎಂದು ಹೇಳಿದ್ದಾರೆ.
ಭೋಪಾಲ್: ಮಧ್ಯಪ್ರದೇಶ ಸರ್ಕಾರದ 2003ರಿಂದ 2023ರ ವರೆಗಿನ 'ರಿಪೋರ್ಟ್ ಕಾರ್ಡ್' ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಬಿಡುಗಡೆ ಮಾಡಿದ್ದು, 'ಬಿಜೆಪಿ ಆಡಳಿತವು ರಾಜ್ಯವನ್ನು ಬಿಮಾರು ರಾಜ್ಯಗಳ ಪಟ್ಟಿಯಿಂದ ಹೊರ ತಂದಿದೆ' ಎಂದು ಹೇಳಿದ್ದಾರೆ.
ಭೋಪಾಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಸಂಸದ ವಿ.ಡಿ. ಶರ್ಮಾ ಮತ್ತು ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಸಮ್ಮುಖದಲ್ಲಿ ಶಾ ಅವರು 20 ವರ್ಷಗಳ 'ರಿಪೋರ್ಟ್ ಕಾರ್ಡ್' ಬಿಡುಗಡೆಗೊಳಿಸಿದರು.
'ಮಧ್ಯಪ್ರದೇಶವು 1956ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ 2003ರ ವರೆಗೆ ಐದರಿಂದ ಆರು ವರ್ಷಗಳನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯವು 'ಬಿಮಾರು' ಪಟ್ಟಿಯಲ್ಲೇ ಉಳಿದಿತ್ತು' ಎಂದು ಶಾ ಅವರು ಹೇಳಿದ್ದಾರೆ.
'ಬಿಜೆಪಿ ಸರ್ಕಾರವು ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದೆ' ಎಂದೂ ಬಣ್ಣಿಸಿದ್ದಾರೆ.
'ಬಿಮಾರು' (BIMARU) ಸಂಕ್ಷಿಪ್ತ ಪದವನ್ನು ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳನ್ನು ಉಲ್ಲೇಖಿಸಲು ಬಳಸಲಾಗುತ್ತಿದೆ. ಈ ರಾಜ್ಯಗಳು ಆರ್ಥಿಕ ಬೆಳವಣಿಗೆ, ಆರೋಗ್ಯ, ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಹಿಂದುಳಿದಿವೆ ಎಂಬುದನ್ನು ಇದು ಸೂಚಿಸಿತ್ತದೆ.
ರಾಜ್ಯದಲ್ಲಿ ಸುಮಾರು 53 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ತನ್ನ ಆಡಳಿತಾವಧಿಯ ರಿಪೋರ್ಟ್ ಕಾರ್ಡ್ ಅನ್ನು ಬಿಡುಗಡೆ ಮಾಡಬೇಕು ಎಂದು ಬಿಜೆಪಿಯ ಹಿರಿಯ ಮುಖಂಡರು ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯು ಈ ವರ್ಷದ ಕೊನೆಯಲ್ಲಿ ನಡೆಯಲಿದೆ.