ತಿರುವನಂತಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸದಂತೆ ನಿಷೇದ ಹೇರಲು ಸಾರಿಗೆ ಕಾರ್ಯದರ್ಶಿ ಬಿಜು ಪ್ರಭಾಕರ್ ಶಿಫಾರಸು ಮಾಡಿದ್ದಾರೆ.
ಸರ್ವೀಸ್ ರಸ್ತೆಗಳಲ್ಲಿ ಮಾತ್ರ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಿದರೆ ಸಾಕು ಎಂಬುದು ಕಾರ್ಯದರ್ಶಿಯ ನಿಲುವು. ಕರಡು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪೂರ್ಣಗೊಂಡಾಗ ದ್ವಿಚಕ್ರ ವಾಹನಗಳ ಸಂಚಾರ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದು ಬಿಜು ಪ್ರಭಾಕರ್ ಅವರ ಪ್ರಸ್ತಾವ. ದ್ವಿಚಕ್ರ ವಾಹನಗಳು ಕಾರು ಮತ್ತು ದೊಡ್ಡ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ತಡೆಯಲು ಇಂತಹ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದ ನಂತರವೇ ಇದನ್ನು ಜಾರಿಗೆ ತರಲು ಸಾಧ್ಯ. ಹೆಚ್ಚಿನ ಅಪಘಾತಗಳಿಗೆ ದ್ವಿಚಕ್ರ ವಾಹನಗಳೇ ಕಾರಣ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಬೈಕ್ ಅಪಘಾತದಲ್ಲಿ 1288 ಮಂದಿ ಸಾವನ್ನಪ್ಪಿದ್ದರು. 2021 ರಲ್ಲಿ 1069 ಜನರು ಸಾವನ್ನಪ್ಪಿದ್ದಾರೆ. ಅಪಘಾತಗಳನ್ನು ಕಡಿಮೆ ಮಾಡುವ ಭಾಗವಾಗಿ ಬೈಕ್‍ಗಳ ಗರಿಷ್ಠ ವೇಗವನ್ನು 60ಕ್ಕೆ ಇಳಿಸಲಾಗಿದೆ.