ಭೋಪಾಲ್: ಮೂರನೇ ಮಗು ಇರುವ ವಿಷಯ ಮುಚ್ಚಿಟ್ಟಿದ್ದ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಶಾಲೆಯೊಂದರ ಶಿಕ್ಷಕನನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
ಭೋಪಾಲ್: ಮೂರನೇ ಮಗು ಇರುವ ವಿಷಯ ಮುಚ್ಚಿಟ್ಟಿದ್ದ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಶಾಲೆಯೊಂದರ ಶಿಕ್ಷಕನನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
ಸರ್ಕಾರಿ ಉದ್ಯೋಗ ಗಳಿಸಲು ಈ ವಿಷಯ ಮುಚ್ಚಿಟ್ಟು, ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗ ಇಲ್ಲ ಎನ್ನುವ ನಿಯಮ ಮುರಿದಿದ್ದಕ್ಕೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಸಿಎಂ ರೈಸ್ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದ ಗಣೇಶ್ ಪ್ರಸಾದ್ ಶರ್ಮಾ ಅವರು ಎರಡು ಮಕ್ಕಳು ನಿಯಮ ಮುರಿದಿದ್ದಕ್ಕಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಬಂದ ದೂರಿನ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಗಸ್ಟ್ 2 ರ ವಜಾ ಆದೇಶದಲ್ಲಿ ಹೇಳಲಾಗಿದೆ.
ಜಿಲ್ಲಾ ಶಿಕ್ಷಣಾಧಿಕಾರಿ ಅವರ ತನಿಖೆ ವೇಳೆ ಶರ್ಮಾ ಅವರ ಮೇಲಿದ್ದ ಆರೋಪ ಸಾಬೀತಾಗಿದೆ ಎಂದು ವಜಾ ಆದೇಶದಲ್ಲಿ ಹೇಳಲಾಗಿದೆ.
ಶಿಕ್ಷಕ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಅಲ್ಲದೇ ಮೂರನೇ ಮಗುವಿನ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಅದರಲ್ಲಿ ವಿವರಿಸಲಾಗಿದೆ. ಘಟನೆ ಸಂಬಂಧ ಪೊಲೀಸ್ ದೂರೂ ದಾಖಲಾಗಿದೆ.