ಬದಿಯಡ್ಕ: ಹಿಂದು ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕೇರಳ ವಿಧಾನ ಸಭಾಧ್ಯಕ್ಷ ಎ.ಎನ್.ಶಂಸೀರ್ ಹಾಗೂ ಇತ್ತೀಚೆಗೆ ಹಿಂದುಗಳ ವಿರುದ್ಧ ಘೋಷಣೆಯನ್ನು ಕೂಗಿದ ಮತಾಂಧ ಶಕ್ತಿಗಳ ವಿರುದ್ಧ ಹಾಗೂ ರಾಜ್ಯ ಎಡರಂಗ ಸರ್ಕಾರದ ವಿರುದ್ಧ ಸಂಘ ಪರಿವಾರದ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಗಣೇಶ ಮಂದಿರದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಬದಿಯಡ್ಕ ಬಸ್ ತಂಗುದಾಣದಲ್ಲಿ ನಡೆದ ಸಭೆಯಲ್ಲಿ ಹಿಂದೂ ಮುಖಂಡ ರಾಜನ್ ಮುಳಿಯಾರು ಮಾತನಾಡಿ ಹಿಂದುಗಳ ಭಾವನೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸಿರಲು ಸಾಧ್ಯವಿಲ್ಲ. ಮಾರ್ಕಿಸ್ಟ್ ಪಕ್ಷವು ಹಿಂದುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಗಮನಿಸಿಯೂ ಸುಮ್ಮನೆ ಕುಳಿತುಕೊಳ್ಳುವ ಸಮಾಜ ನಮ್ಮದಲ್ಲ. ಹಿಂದುಗಳ ಭಾವನೆಗೆ ಧಕ್ಕೆ ತಂದರೆ ಇಲ್ಲಿ ಕೇಳುವವರು ಯಾರೂ ಇಲ್ಲ ಎಂಬುದಾಗಿ ಯಾರೂ ತಿಳಿಯಬೇಕಿಲ್ಲ ಎಂದು ಗುಡುಗಿದರು. ಕೇರಳದಲ್ಲಿ ಅದೆಷ್ಟೋ ಅನ್ಯಾಯಗಳು ನಡೆದರೂ ಇಲ್ಲಿನ ಮುಸ್ಲಿಂಲೀಗ್, ಮಾರ್ಕಿಸ್ಟ್ ನಾಯಕರಿಗೆ ಗೊತ್ತೇ ಇಲ್ಲದಂತೆ ನಟಿಸಿ, ಗುಜರಾತ್, ಉತ್ತರಪ್ರದೇಶದ ಘಟನೆಗಳನ್ನು ಕೇರಳದಲ್ಲಿ ದೊಡ್ಡ ವಿಷಯ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅವರು ದೂರಿದರು.
ಪರಿವಾರ ಸಂಘಟನೆಗಳ ಮುಖಂಡರಾದ ಹರೀಶ್ ನಾರಂಪಾಡಿ, ಸುನಿಲ್ ಪಿ.ಆರ್., ಸಂಕಪ್ಪ ಭಂಡಾರಿ, ರವಿ ಏತಡ್ಕ, ಭಾಸ್ಕರ, ಸುರೇಶ್ ಬಿ.ಕೆ., ಹರೀಶ್ ಗೋಸಾಡ, ಎಂ.ನಾರಾಯಣ ಭಟ್, ಶೈಲಜಾ ಭಟ್, ಅವಿನಾಶ್ ರೈ, ಬಾಲಕೃಷ್ಣ ಶೆಟ್ಟಿ ಕಡಾರು, ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.