ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದೆ. ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣ ಸಾಮಾನ್ಯವಾಗಿ ಹೆಚ್ಚಾಗುತ್ತದೆ, ಕಾರಣ ಈ ಸಮಯದಲ್ಲಿ ಸೊಳ್ಳೆಗಳ ಕಾಟ ಅಧಿಕವಿರುತ್ತದೆ, ಡೆಂಗ್ಯೂ ಸೋಂಕು ಇರುವ ಸೊಳ್ಳೆಗಳು (ಈಡೀಸ್ ಈಜಿಪ್ಟೆ ) ಕಚ್ಚುವುದರಿಂದ ಡೆಂಗ್ಯೂ ಕಾಯಿಲೆ ಬರುವುದು. ಡೆಂಗ್ಯೂ ಸೋಂಕು ಮನುಷ್ಯನ ದೇಹಕ್ಕೆ ತಗುಲಿದ 7 ದಿನದ ಒಳಗಾಗಿ ಅದರ ಲಕ್ಷಣಗಳು ಕಂಡು ಬರುವುದು.
ಡೆಂಗ್ಯೂ ಸೋಂಕು ತಗುಲಿದಾಗ ಮೊದಲಿಗೆ ಜ್ವರ ಕಂಡು ಬರುವುದು, ನಂತರ ಡೆಂಗ್ಯೂವಿನ ಇತರ ಲಕ್ಷಣಗಳು ಕಂಡು ಬರುವುದು. ಈ ಡೆಂಗ್ಯೂ ಕಾಯಿಲೆ ಬಂದರೆ ಡೆಂಗ್ಯೂವಿನಿಂದ ಗುಣಮುಖರಾದ ಮೇಲೂ ಕೂಡ ಅನೇಕ ಅಡ್ಡಪರಿಣಾಮಗಳು ಕಾಡುವುದು. ಡೆಂಗ್ಯೂವಿನ ಲಕ್ಷಣಗಳು ಹಾಗೂ ಡೆಂಗ್ಯೂವಿನಿಂದ ಚೇತರಿಸಿಕೊಂಡ ಮೇಲೂ ಯಾವೆಲ್ಲಾ ಸಮಸ್ಯೆ ಕಾಡುತ್ತದೆ ಎಂದು ನೋಡೋಣ:
ಡೆಂಗ್ಯೂ ಕಾಯಿಲೆಯ ಲಕ್ಷಣಗಳುಡೆಂಗ್ಯೂ ಲಕ್ಷಣಗಳು* ಅತ್ಯಧಿಕ ಜ್ವರ
* ಚಳಿಜ್ವರ'
* ತುಂಬಾ ತಲೆನೋವು
* ವಾಂತಿ ಬೇಧಿ
* ತುಂಬಾ ಸುಸ್ತು
* ಹಸಿವು ಇಲ್ಲದಿರುವುದು
* ತ್ವಚೆಯಲ್ಲಿ ಗುಳ್ಳೆಗಳು ಕಂಡು ಬರುವುದು
* ಕಣ್ಣುಗಳಲ್ಲಿ ನೋವು
* ಹೊಟ್ಟೆ ನೋವು
* ರಕ್ತದೊತ್ತಡ ತುಂಬಾನೇ ಕಡಿಮೆಯಾಗುವುದು
* ಮೂರ್ಛೆರೋಗ
* ತುಂಬಾ ವಾಂತಿ, ಬೇಧಿ
* ವಾಂತಿಯಲ್ಲಿ ರಕ್ತ
* ಕಿಬ್ಬೊಟ್ಟೆಯಲ್ಲಿ ನೋವು
ಡೆಂಗ್ಯೂ ಕಾಯಿಲೆಯಿಂದ ಚೇತರಿಸಿಕೊಂಡ ಮೇಲೂ ತಿಂಗಳುಗಟ್ಟಲೆ ಈ ಸಮಸ್ಯೆ ಬಾಧಿಸುವುದು:
ತುಂಬಾ ಸುಸ್ತು: ಡೆಂಗ್ಯೂವಿನಿಂದ ಚೇತರಿಸಿಕೊಂಡ ತುಂಬಾ ದಿನಗಳವರೆಗೆ ಸುಸ್ತು ಕಡಿಮೆಯಾಗುವುದೇ ಇಲ್ಲ, ಕೆಲವರಿಗೆ ತಿಂಗಳಾದವರು ಸುಸ್ತು ಕಡಿಮೆಯಾಗುವುದಿಲ್ಲ, ಸ್ವಲ್ಪ ನಡೆದಾಡಿದರೆ ಸಾಕು ತುಂಬಾ ಸುಸ್ತು ಅನಿಸಲಾರಂಭಿಸುತ್ತದೆ. ಮೈಕೈ ನೋವು ತುಂಬಾ ಇರುತ್ತದೆ.
ಕೂದಲು ಉದುರುವುದು
ಡೆಂಗ್ಯೂ ಸಮಸ್ಯೆಯಿಂದ ಚೇತರಿಸಿಕೊಂಡವರಲ್ಲಿ ಕೂದಲು ಉದುರುವ ಸಮಸ್ಯೆ ಕಂಡು ಬರುವುದು ಸರ್ವೇ ಸಾಮಾನ್ಯ. ಡೆಂಗ್ಯೂ ಬಂದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಕೆಲವರಲ್ಲಿ alopecia ಅಂದರೆ ಕೂದಲು ಕೆಲವು ಕಡೆ ಸಂಪೂರ್ಣವಾಗಿ ಪ್ಯಾಚ್-ಪ್ಯಾಚ್ ಉಂಟಾಗುವುದು. ಹಾರ್ಮೋನ್‌ಗಳ ಬದಲಾವಣೆ, ಒತ್ತಡದಿಂದಾಗಿ ಈ ರೀತಿಯಾಗುವುದು.
ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು
ಡೆಂಗ್ಯೂ ಬಂದರೆ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆಯಾಗುವುದು. ಇದರಿಂದಾಗಿ ದೇಹ ತುಂಬಾನೇ ದುರ್ಬಲವಾಗುವುದು ಅಲ್ಲದೆ ಇತ ಸೋಂಕು, ಬ್ಯಾಕ್ಟಿರಿಯಾ ಬೇಗನೆ ತಗುಲುವ ಸಾಧ್ಯತೆ ಇದೆ.
ಸಂಧಿ ನೋವು
ಡೆಂಗ್ಯೂ ಸಮಸ್ಯೆ ಬಂದವರಿಗೆ ಕೈ ನೋವಿನ ಸಮಸ್ಯೆ ಕಂಡು ಬರುವುದು. 5-6 ತಿಂಗಳಾದರೂ ಈ ರೀತಿ ನೋವು ಕೆಲವರಿಗೆ ಕಾಡುವುದು. ದೇಹದಲ್ಲಿ ಪೋಷಕಾಂಶದ ಕೊರತೆ ಇರುತ್ತದೆ, ಇದರಿಂದಾಗಿ ಸಣಧಿವಾತದ ಸಮಸ್ಯೆ ಉಂಟಾಗುವುದು.
ಡೆಂಗ್ಯೂವಿನಿಂದ ಗುಣಮುಖರಾದ ಮೇಲೆ ಮರಳಿ ಆರೋಗ್ಯ ಪಡೆಯುವುದು ಹೇಗೆ?
* ದೇಹ ತುಂಬಾ ದುರ್ಬಲವಾಗಿರುತ್ತದೆ, ಹಾಗಂತ ಸುಮ್ಮನೆ ಕೂರಬೇಡಿ, ಲಘು ವ್ಯಾಯಾಮ ಮಾಡಿ, ಇದರಿಂದ ಸ್ನಾಯಗಳು ಬಲವಾಗುವುದು, ದೇಹದಲ್ಲಿ ಚೇತರಿಕೆ ಕಂಡು ಬರುವುದು.
* ಪೋಷಕಾಂಶ ಅಧಿಕವಿರುವ ಆಹಾರವನ್ನು ಸೇವಿಸಿ.
* ದಿನಾ 8 ಲೋಟ ನೀರು ಕುಡಿಯಿರಿ
* ಇತರ ಸೋಂಕು ತಗುಲದಂತೆ ಜಾಗ್ರತೆವಹಿಸಿ.