ಉಪ್ಪಳ: ಬಾಯಾರು: ಕನ್ನಿಹಿತ್ತಿಲು ಶ್ರೀ ಮಲರಾಯ ಧೂಮಾವತಿ ಪಂಜುರ್ಲಿ ನಾಗ ಪರಿವಾರ ದೈವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ತರವಾಡು ಸಮಿತಿ ವಿಶೇಷ ಸಭೆ ಜರಗಿತು. ಸಮಿತಿ ಅಧ್ಯಕ್ಷ ಬಂಟಪ್ಪ ಪೂಜಾರಿ ನೇರೊಳ್ತಡಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮಾಣಿಲ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಧರ್ ಬಾಳೆಕಲ್ಲು ಇವರನ್ನು ತರವಾಡಿನ ಹಿರಿಯರ ಸಮ್ಮುಖದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.ಗೌರವ ಸ್ವೀಕರಿಸಿದ ಶ್ರೀಧರ್ ಬಾಳೆಕಲ್ಲು ಅವರು ಮಾತನಾಡಿ, ರಾಜಕೀಯ ಎಂದರೆ ಚುನಾವಣೆ ಸಂಧರ್ಭದಲ್ಲಿ ಮಾತ್ರ. ಚುನಾವಣೆ ಮುಗಿದರೆ ಎಲ್ಲರನ್ನು ಒಂದೇ ಭಾವನೆಯಲ್ಲಿ ನೋಡುವ ಮನೋಭಾವ ನಮ್ಮದಾಗಿರಬೇಕು. ಆ ಮೂಲಕ ಜನತೆಯ ಪ್ರೀತಿಯನ್ನು ಗಳಿಸಲು ಸಾಧ್ಯವಾಯಿತು. ನಿಮ್ಮೆಲ್ಲರನ ಪ್ರೀತಿಗೆ ನಾನು ಚಿರ ಋಣಿ ಎಂದರು.
ಈ ಸಂಧರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ನಾರಾಯಣ ಕೊರಕ್ಕೋಡು , ಕೃಷ್ಣ ಕುಮಾರ್ ಅಲೆಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು. ಭಾಸ್ಕರ ಕೆ ಕಾಸರಗೋಡು,ಸ್ವಾಗತಿಸಿ, ಸಂಜೀವ ಪೂಜಾರಿ ಕಲ್ಲುಗುಂಡಿ ವಂದಿಸಿದರು.