ಮಂಜೇಶ್ವರ: ವರ್ಕಾಡಿ ಮುಡೂರುತೋಕೆಯ ಎಸ್.ಎಸ್.ಎ. ಎಲ್.ಪಿ.ಶಾಲೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ಲತೀಫ್ ಧ್ವಜಾರೋಹಣಗೈದರು. ಶಾಲಾ ಪ್ರಬಂಧಕ ದೇವಪ್ಪ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಸಿರು ಕ್ರಿಯಾಸೇನೆಯ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ಸ್ವಾತಂತೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆ ಈ ಸಂದರ್ಭ ಜರಗಿತು. ಶಾಲಾ ಮಾತೃ ಸಮಿತಿ ಅದ್ಯಕ್ಷೆ ಸರಿತಾ ಶುಭಹಾರೈಸಿದರು. ಮುಖ್ಯೋಪಾಧ್ಯಾಯ ಶೈಲೇಶ್ ಸ್ವಾಗತಿಸಿ, ಶಿಕ್ಷಕಿ ಚಿತ್ರಾ ನೀರೂಪಿಸಿದರು. ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು.