ನವದೆಹಲಿ: 'ಇಂಡಿಯಾ' ಮೈತ್ರಿಕೂಟದ ಅಂಗಪಕ್ಷಗಳ ನಡುವೆ ಎಷ್ಟರ ಮಟ್ಟಿಗೆ ವಿಶ್ವಾಸ ಇದೆ ಎಂಬುದನ್ನು ಒರೆಗೆ ಹಚ್ಚುವ ಸಲುವಾಗಿ ವಿರೋಧ ಪಕ್ಷಗಳು ತಮ್ಮ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ನವದೆಹಲಿ: 'ಇಂಡಿಯಾ' ಮೈತ್ರಿಕೂಟದ ಅಂಗಪಕ್ಷಗಳ ನಡುವೆ ಎಷ್ಟರ ಮಟ್ಟಿಗೆ ವಿಶ್ವಾಸ ಇದೆ ಎಂಬುದನ್ನು ಒರೆಗೆ ಹಚ್ಚುವ ಸಲುವಾಗಿ ವಿರೋಧ ಪಕ್ಷಗಳು ತಮ್ಮ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ತನ್ನ ಅಂಗಪಕ್ಷಗಳ ನಡುವಿನ ಅಪನಂಬಿಕೆಯೇ 'ಇಂಡಿಯಾ' ಮೈತ್ರಿಕೂಟದ ವೈಶಿಷ್ಟ್ಯ ಎಂದು ಟೀಕಿಸಿದರು.
'ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಅಹಂಕಾರದಿಂದ (ಘಮಂಡಿಯಾ) ಕೂಡಿದೆ' ಎಂದ ಮೋದಿ, ದೆಹಲಿ ಸೇವಾ ವಿಷಯಗಳ ಮೇಲೆ ನಿಯಂತ್ರಣ ಕುರಿತ ಮಸೂದೆಯನ್ನು ಸೋಲಿಸುವ ಮೂಲಕ 'ಸೆಮಿಫೈನಲ್'ನಲ್ಲಿ ಗೆಲುವು ತಂದುಕೊಟ್ಟಿದ್ದೀರಿ ಎಂದು ಪಕ್ಷದ ರಾಜ್ಯಸಭಾ ಸಂಸದರನ್ನು ಅಭಿನಂದಿಸಿದರು' ಎಂಬುದಾಗಿ ಮೂಲಗಳು ಹೇಳಿವೆ.
'ದೆಹಲಿ ಸೇವಾ ವಿಷಯಗಳ ಮೇಲೆ ನಿಯಂತ್ರಣ ಕುರಿತ ಮಸೂದೆಗೆ ಸಂಬಂಧಿಸಿ ರಾಜ್ಯಸಭೆಯಲ್ಲಿ ನಡೆಯುವ ಮತ ವಿಭಜನೆ ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಕೆಲ ವಿಪಕ್ಷಗಳು ಹೇಳಿದ್ದವು ಎಂದು ಕುಟುಕಿದ ಮೋದಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು' ಎಂದು ಇವೇ ಮೂಲಗಳು ಹೇಳಿವೆ
'ನನ್ನ ಸರ್ಕಾರದ ವಿರುದ್ಧ 2023ರಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ' ಎಂಬುದಾಗಿ ವಿಪಕ್ಷಗಳನ್ನು ಉದ್ದೇಶಿಸಿ 2018ರಲ್ಲಿ ಹೇಳಿದ್ದನ್ನು ಕೂಡ ಮೋದಿ ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿವೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ಮೆಘವಾಲ್ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತಿತರರು ಇದ್ದರು -ಪಿಟಿಐ ಚಿತ್ರ-ನರೇಂದ್ರ ಮೋದಿ, ಪ್ರಧಾನಿಬಿಜೆಪಿ ಸಂಸದರು 2024ರ ಲೋಕಸಭಾ ಚುನಾವಣೆಗೂ ಮುನ್ನ ಕೊನೆ ಚೆಂಡಿನಲ್ಲಿ ಸಿಕ್ಸರ್‌ಗಳನ್ನು ಬಾರಿಸಬೇಕು.