ಕಾಸರಗೋಡು : ಜಿಲ್ಲೆಯ ಪ್ರವಾಸೋದ್ಯಮ ವಲಯದ ಉದ್ಯಮಿಗಳಿಗಾಗಿ ಉಚಿತ ಉದ್ಯಮಶೀಲತಾ ತರಬೇತಿ ಆ. 4ರಂದು ಬೆಳಗ್ಗೆ 10ಕ್ಕೆ ಬೇಕಲ ಬೀಚ್ ಪರ್ಕ್‍ನಲ್ಲಿ ಜರುಗಲಿರುವುದು. ಬೇಕಲ್ ರೆಸಾರ್ಟ್ ಅಭಿವೃದ್ಧಿ ನಿಗಮದ (ಬಿಆರ್‍ಡಿಸಿ) ಆಶ್ರಯದಲ್ಲಿ ತರಬೇತಿ ಆಯೋಜಿಸಲಾಗಿದೆ.
ಮಧ್ಯಾಹ್ನ 1ರವರೆಗೆ ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಭಾಗವಹಿಸಲು ಆಸಕ್ತಿಯುಳ್ಳವರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ(9495946361, 9446863300)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.