ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ಘಟಕದ ಓಣಂ ಹಬ್ಬವನ್ನು ಕನ್ಯಪ್ಪಾಡಿಯ ಆಶ್ರಯ ಆಶ್ರಮದಲ್ಲಿ ಹಿರಿಯ ಜೀವನಗಳೊಂದಿಗೆ ಭಾನುವಾರ ಆಚರಿಸಲಾಯಿತು. ಓಣಂ ಹಬ್ಬದ ಅಂಗವಾಗಿ ಆಶ್ರಮದಲ್ಲಿ ಕಳೆಯುವವರಿಗಾಗಿ ಒಂದು ಹೊತ್ತಿನ ಊಟವನ್ನು ಎನ್ನೆಸ್ಸೆಸ್ ಘಟಕ ವತಿಯಿಂದ ವಿತರಿಸಲಾಯಿತು.
ಆಶ್ರಮದ ಹಿರಿಯರೊಂದಿಗೆ ಭಜನೆ, ಕಥೆ, ಜಾನಪದ ಹಾಡುಗಳ ಮೂಲಕ ಸಾಂಪ್ರದಾಯಿಕವಾಗಿ ಓಣಂ ಹಬ್ಬವನ್ನು ಆಚರಿಸಲಾಯಿತು. ಹಲವು ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನ ನೀಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗತ್ತು. ಕಾಸರಗೋಡು ಸರ್ಕಾರಿ ಕಾಲೇಜು ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಆಶಾಲತಾ ಚೇವಾರ್ ಬಹುಮಾನ ವಿತರಿಸಿದರು. ಈ ಸಂದರ್ಭ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಹಣವನ್ನು ಆಶ್ರಮದ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು. ಎನ್ನೆಸ್ಸೆಸ್ಸ್ ಯೋಜನಾಧಿಕಾರಿ ಆಸೀಫ್ ಕಾಕ್ಕಶೇರಿ ಮತ್ತು ಎನ್ನೆಸ್ಸೆಸ್ ಸೆಕ್ರೆಟರಿ ಸಾತ್ವಿಕ್ ಚಂದ್ರನ್.ಪಿ, ಅಭಿಜಿತ್. ಎ, ರಾಹುಲ್ ರಾಜ್, ಸ್ಮಿತಾ, ಸೃಷ್ಟಿ. ಬಿ, ರೇವತಿ.ಪಿ, ಮಹೀರಾ ಬೇಗಂ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.