ವಿಶ್ವಸಂಸ್ಥೆ: ಅಲ್‌ಕೈದಾ ಇನ್ ದಿ ಅರೆಬಿಯನ್ ಪೆನಿನ್ಸುಲಾ (ಎಕ್ಯುಎಪಿ) ಗುಂಪಿನ ಉಗ್ರರು 18 ತಿಂಗಳ ಹಿಂದೆ ಯೆಮೆನ್‌ನಿಂದ ಅಪಹರಿಸಿದ್ದ ವಿಶ್ವಸಂಸ್ಥೆಯ ಐವರು ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ.
ವಿಶ್ವಸಂಸ್ಥೆ: ಅಲ್‌ಕೈದಾ ಇನ್ ದಿ ಅರೆಬಿಯನ್ ಪೆನಿನ್ಸುಲಾ (ಎಕ್ಯುಎಪಿ) ಗುಂಪಿನ ಉಗ್ರರು 18 ತಿಂಗಳ ಹಿಂದೆ ಯೆಮೆನ್‌ನಿಂದ ಅಪಹರಿಸಿದ್ದ ವಿಶ್ವಸಂಸ್ಥೆಯ ಐವರು ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ.
ಉಗ್ರರು ಬಿಡುಗಡೆ ಮಾಡಿರುವವರಲ್ಲಿ ನಾಲ್ವರು ಯೆಮೆನ್ ದೇಶದವರು ಮತ್ತು ಒಬ್ಬರು ಬಾಂಗ್ಲಾದೇಶದವರಾಗಿದ್ದು, ಎಲ್ಲರೂ ಆರೋಗ್ಯದಿಂದಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಾನವಹಕ್ಕುಗಳ ಘಟಕದ ಸಂಯೋಜಕ ಡೇವಿಡ್ ಗ್ರೆಸ್ಲಿ ಶುಕ್ರವಾರ ಹೇಳಿದ್ದಾರೆ.
ಒಮನ್ ದೇಶದ ಅಧಿಕಾರಿಗಳು ಸೇರಿದಂತೆ ಹಲವರು ಸಂಧಾನ ಮಾತುಕತೆ ನಡೆಸಿದ ಬಳಿಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ಉಪ ವಕ್ತಾರ ಫರ್ಹಾನ್ ಹಕ್ ವಿವರಿಸಿದ್ದಾರೆ.
ದಕ್ಷಿಣ ಯೆಮೆನ್‌ನಲ್ಲಿ ಸಕ್ರಿಯವಾಗಿರುವ ಎಕ್ಯುಎಪಿ ಗುಂಪಿನ ಉಗ್ರರು ಅಲ್ ಕೈದಾ ಸಂಘಟನೆಯ ಜೊತೆ ನಂಟು ಹೊಂದಿದ್ದು, ಈ ಗುಂಪು ಅತ್ಯಂತ ಅಪಾಯಕಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ. 2022 ಫೆಬ್ರುವರಿಯಲ್ಲಿ ಯೆಮೆನ್‌ನ ಅಬ್ಯಾನ್ ಪ್ರಾಂತ್ಯದಿಂದ ಈ ಐವರನ್ನು ಅಪಹರಿಸಲಾಗಿತ್ತು.