ಸಮರಸ ಚಿತ್ರಸುದ್ದಿ: ಮಂಜೇಶ್ವರ: ಹೊಸಂಗಡಿ ಸನಿಹದ ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದಲ್ಲಿ ಕ್ಷೇತ್ರದ ಮಹಿಳಾ ವೇದಿಕೆ ವತಿಯಿಂದ ಹತ್ತೊಂಭತ್ತನೇ ವರ್ಷದ ಶ್ರೀ ವರ ಮಹಾಲಕ್ಷ್ಮೀ ಪೂಜೆಯನ್ನು ಆಚರಿಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ ವಾಮನ ಭಟ್ ಮಾಣಿಲ ಇವರ ನೇತೃತ್ವದಲ್ಲಿ ರಾಘವೇಂದ್ರ ಭಟ್ ದಡ್ಡ0ಗಡಿ ಅವರ ಪೌರೋಹಿತ್ಯ ಕಾರ್ಯಕ್ರಮ ನಡೆಯಿತು.