ಶ್ರೀನಗರ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಸೋಮವಾರ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಉಪಕರಣವನ್ನು (ಐಇಡಿ) ಸೋಮವಾರ ಪತ್ತೆ ಮಾಡಿ, ನಿಷ್ಕ್ರಿಯಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಕಾನಿಸ್ಪೋರಾ ಪ್ರದೇಶದ ಕಾಲೇಜೊಂದರ ಬಳಿ ಐಇಡಿ ಇದ್ದ ಚೀಲವೊಂದನ್ನು ಪಹರೆ ಕಾರ್ಯದಲ್ಲಿದ್ದ ಸೇನೆ ಮತ್ತು ಪೊಲೀಸರ ತಂಡವು ಮಧ್ಯಾಹ್ನ ಪತ್ತೆ ಮಾಡಿತು.
ಇದಕ್ಕೂ ಮೊದಲು, ಕುಪ್ವಾರ ಜಿಲ್ಲೆಯ ಹೀರಿ ಪ್ರದೇಶದಲ್ಲಿಯ ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಚೀಲವೊಂದು ಪತ್ತೆಯಾಗಿತ್ತು. ಅದರಿಂದ ಸ್ಫೋಟಕವನ್ನು ವಶಕ್ಕೆ ತೆಗೆದುಕೊಂಡು ಬಳಿಕ ನಿಷ್ಕ್ರಿಯಗೊಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.