ಮುಂಬೈ: ಕೆನೆಡಾ ಪ್ರಜೆಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವವನ್ನು ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ದಿನದಂದು ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಮುಂಬೈ: ಕೆನೆಡಾ ಪ್ರಜೆಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವವನ್ನು ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ದಿನದಂದು ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
1990ರಲ್ಲಿ ಸತತ 15 ಚಿತ್ರಗಳ ಸೋಲಿನ ನಂತರ ಕೆನಡಾ ದೇಶದ ಪೌರತ್ವ ಪಡೆಯುವುದು ಅವರಿಗೆ ಅನಿವಾರ್ಯವಾಗಿತ್ತಂತೆ. ಅದು ತಮ್ಮ ಬದುಕಿನ ಅತ್ಯಂತ ಕಠಿಣ ಪರಿಸ್ಥಿತಿ ಎಂದು ಈ ಹಿಂದೆ ಅಕ್ಷಯ್ ಹೇಳಿದ್ದರು.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯೇತರ ಸಂದರ್ಶನವನ್ನು ಅಕ್ಷಯ್ ಕುಮಾರ್ ನಡೆಸಿಕೊಟ್ಟಿದ್ದರು. ಆದರೆ ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮತ ಚಲಾಯಿಸಿರಲಿಲ್ಲ. ಇದು ಅವರ ಪೌರತ್ವದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿರುವುದಾಗಿ ಆ ಸಂದರ್ಭದಲ್ಲಿ ಅಕ್ಷಯ್ ಹೇಳಿದ್ದರು. ಬಹು ಬೇಡಿಕೆಯ ನಟ ಅಕ್ಷಯ್ ಕುಮಾರ್ ಅವರ 'ಒ ಮೈ ಗಾಡ್-2' ಚಿತ್ರ ಇತ್ತೀಚೆಗೆ ತೆರೆ ಕಂಡಿದೆ. ಪಂಕಜ್ ತ್ರಿಪಾಠಿ ಹಾಗೂ ಯಾಮಿ ಗೌತಮ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.