ಮಂಜೇಶ್ವರ: ಕೇರಳ ಮಾಜಿ ಮುಖ್ಯಮಂತ್ರಿ ದಿ. ಉಮ್ಮನ್ ಚಾಂಡಿ ಇವರಿಗೆ ಕಾಸರಗೋಡು ಜಿಲ್ಲಾ ಕೊಂಕಣಿ ಕ್ರೈಸ್ತರ ಪರವಾಗಿ ಶ್ರದ್ಧಾಂಜಲಿ ಕಾರ್ಯಕ್ರಮವು ವರ್ಕಾಡಿಯಲ್ಲಿ ನಡೆಯಿತು.
ಕೆಥೋಲಿಕ್ ಸಭಾ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ವಲಯ ಕೆಥೊಲಿಕ್ ಸಭಾ ಅಧ್ಯಕ್ಷ ರಾಜು ಜೋನ್ ಡಿ ಸೊಜಾ ವಹಿಸಿದ್ದರು. ಜಿಲ್ಲೆಯ ಕೊಂಕಣಿ ಕ್ರೈಸ್ತ ಸಮುದಾಯದ ಸರ್ವ ರಾಜಕೀಯ ಪಕ್ಷಗಳ ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಿದ ಕಾರ್ಯಕ್ರಮದಲ್ಲಿ ವರ್ಕಾಡಿ ಇಗರ್ಜಿ ಧರ್ಮ ಗುರು ವಂ.ಬೇಸಿಲ್ ವಾಸ್ ಮುಖ್ಯ ಅಥಿತಿಯಾಗಿದ್ದರು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೊ, ಕುಂಬ್ಡಾಜೆ ಪಂಚಾಯತಿ ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ನ್ಯಾಯವಾದಿ ಎಂ. ಎಸ್. ಥೋಮಸ್. ಡಿ ಸೋಜಾ, ಅಖಿಲ ಭಾರತ ಜನಾದಿಪತ್ಯ ಮಹಿಲಾ ಅಸೋಸಿಯೇಷನ್ ನ ಮಂಜೇಶ್ವರ ವಲಯ ಅಧ್ಯಕ್ಷೆ ಐರಿನ್ ಜೊಸ್ಪಿನ್, ಕುಂಬಳೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿಲ್ಪ್ರೆಡ್ ಡಿಸೊಜಾ, ಮುಂತಾದ ಗಣ್ಯರು ಉಮ್ಮನ್ ಚಾಂಡಿ ಯವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.
ಕೆಥೊಲಿಕ್ ಸಭಾ ಕೇಂದ್ರೀಯ ಕೋಶಾಧಿಕಾರಿ ಫ್ರಾನ್ಸಿಸ್ ಮೊಂತೇರೊ, ಮಾಜಿ ಅಧ್ಯಕ್ಷ ರಾಜು ಸ್ಟೀಫನ್ ಕುಂಬಳೆ, ವಿಲ್ ಫ್ರೆಡ್ ಮನೋಹರ್ ಬೇಳ, ಕಾರ್ಯದರ್ಶಿ ಜೊಸ್ಸಿ ಬೇಳ, ವರ್ಕಾಡಿ ಘಟಕ ಅಧ್ಯಕ್ಷ ಯೇಸುಪ್ರಸಾದ್ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.