HEALTH TIPS

ಮತ್ತೊಂದು ಗಡಿ ಮೀರಿದ ಪ್ರೇಮ: ಭಾರತೀಯ ಪ್ರೇಮಿಗಾಗಿ ದೇಶ ಬಿಟ್ಟು ಬಂದ ಪ್ರೇಯಸಿ!

                ವದೆಹಲಿ: ಪಾಕಿಸ್ತಾನದಿಂದ ಭಾರತ, ಭಾರತದಿಂದ ಪಾಕಿಸ್ತಾನ, ಶ್ರೀಲಂಕಾದಿಂದ ಭಾರತ… ಹೀಗೆ ಪ್ರೀತಿಯ ಕಾರಣಕ್ಕೆ ದೇಶದಿಂದ ದೇಶಕ್ಕೆ ಪ್ರೇಮಿಗಳು ಹೋದ ಪ್ರಕರಣಕ್ಕೆ ಹೊಸ ಸೇರ್ಪಡೆ ಎಂಬಂತೆ ಇನ್ನೊಂದು ಅಂಥದ್ದೇ ಗಡಿ ಮೀರಿದ ಪ್ರಕರಣ ನಡೆದಿದೆ.

                  ದಕ್ಷಿಣ ಕೊರಿಯಾದ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಮದುವೆಯಾಗುವ ಸಲುವಾಗಿ ಭಾರತಕ್ಕೆ ಬಂದಿರುವ ಘಟನೆ ನಡೆದಿದೆ.

                   ದಕ್ಷಿಣ ಕೊರಿಯಾದ ಕಿಮ್​ ಬೊಹ್​ ನಿ ಎಂಬಾಕೆ ತನ್ನ ಪ್ರಿಯಕರ ಭಾರತದ ಸುಖ್​ಜೀತ್ ಸಿಂಗ್​ ಎಂಬಾತನನ್ನು ಮದುವೆಯಾಗಲು ತನ್ನ ದೇಶ ಬಿಟ್ಟುಬಂದಿದ್ದಾಳೆ.

                ಉತ್ತರಪ್ರದೇಶದ ಷಹಜಹಾನ್​ಪುರದ ಸುಖ್​ಜೀತ್ ಸಿಂಗ್ ದಕ್ಷಿಣಕೊರಿಯಾದ ಕೆಫೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಕೆಲವು ದಿನಗಳ ಬಳಿಕ ಅಲ್ಲಿನ 23 ವರ್ಷದ ಯುವತಿ ಕಿಮ್​ ಬೊಹ್ ನಿ ಕೂಡ ಅದೇ ಕೆಫೆಗೆ ಕೆಲಸಕ್ಕೆ ಸೇರಿದ್ದಳು. ನಂತರ ಇಬ್ಬರಿಗೂ ಪರಿಚಯವಾಗಿ, ಸ್ನೇಹ ಪ್ರೇಮವಾಗಿ ಪರಿಣಮಿಸಿತ್ತು.

                  ಈ ಮಧ್ಯೆ ಆರು ತಿಂಗಳ ಮಟ್ಟಿಗೆ ಆತ ಭಾರತಕ್ಕೆ ಮರಳಿದ್ದ. ಆದರೆ ಈ ಅವಧಿಯಲ್ಲಿ ಆತನನ್ನು ಬಿಟ್ಟಿರಲಾಗದೆ ಚಡಪಡಿಸಿದ್ದ ಕೊರಿಯನ್ ಯುವತಿ ತನ್ನ ದೇಶ ಬಿಟ್ಟು ಭಾರತಕ್ಕೆ ಬಂದಿದ್ದಾಳೆ. ಎರಡು ದಿನಗಳ ಹಿಂದೆ ಗುರುದ್ವಾರದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಸದ್ಯ ಇಬ್ಬರೂ ಇಲ್ಲಿನ ತೋಟದ ಮನೆಯಲ್ಲಿ ವಾಸವಿದ್ದಾರೆ.

               ಕಿಮ್ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಒಂದು ತಿಂಗಳ ಮಟ್ಟಿಗೆ ಇಲ್ಲಿರಲಿದ್ದಾಳೆ. ಆ ಬಳಿಕ ಆಕೆ ಅಲ್ಲಿಗೆ ವಾಪಸ್ ತೆರಳಲಿದ್ದಾಳೆ. ಅದಾಗಿ ಮೂರು ತಿಂಗಳ ಬಳಿಕ ಸುಖ್​ಜೀತ್ ಕೂಡ ಸೌತ್ ಕೊರಿಯಾಗೆ ಹೋಗಲಿದ್ದಾನೆ. ಮುಂದೆ ಆಕೆಯೊಂದಿಗೆ ದಕ್ಷಿಣ ಕೊರಿಯಾದಲ್ಲಿ ನೆಲೆಸುವುದಾಗಿ ಆತ ಹೇಳಿಕೊಂಡಿದ್ದಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries