ನವದೆಹಲಿ: 'ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡಿದ್ದು ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿದೆ. 1947ರ ಆ ಭಯಾನಕ ಆಘಾತದ ಪರಿಣಾಮವನ್ನು ಕೆಲವು ಜನರು ಇನ್ನೂ ಅನುಭವಿಸುತ್ತಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಹೇಳಿದ್ದಾರೆ.

ದೇಶ ವಿಭಜನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, 'ಇಬ್ಭಾಗದಿಂದಾಗಿ ದೇಶವು ಭಾರಿ ಬೆಲೆ ತೆರಬೇಕಾಯಿತು' ಎಂದು ಅಭಿಪ್ರಾಯಪಟ್ಟರು.
'1947ರಲ್ಲಿ ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡಿದ್ದು ಇತಿಹಾಸದ ಕರಾಳ ಅಧ್ಯಾಯ. ಇಬ್ಭಾಗವು ಹುಟ್ಟುಹಾಕಿದ ದ್ವೇಷವು ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು ಹಾಗೂ ಕೋಟ್ಯಂತರ ಜನರು ಸ್ಥಳಾಂತರವಾಗಬೇಕಾಯಿತು. ಇಂದು 'ವಿಭಜನೆಯ ಭಯಾನಕ ನೆನಪಿನ ದಿನ'. ದೇಶದ ಇಬ್ಭಾಗದಿಂದ ತಮ್ಮ ಪ್ರಾಣವನ್ನು ಕಳೆದುಕೊಂಡವರಿಗೆ ಹಾಗೂ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ನಾನು ನಮನ ಸಲ್ಲಿಸುತ್ತೇನೆ' ಎಂದು ಶಾ ಅವರು 'ಎಕ್ಸ್' ವೇದಿಕೆಯಲ್ಲಿ ಹಿಂದಿಯಲ್ಲಿ ಬರೆದಿದ್ದಾರೆ.
ದೇಶದ ವಿಭಜನೆಯ ಸಂದರ್ಭದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2021ರಿಂದ ಆಗಸ್ಟ್ 14 ಅನ್ನು 'ವಿಭಜನೆಯ ಭಯಾನಕ ನೆನಪಿನ ದಿನ'ವನ್ನಾಗಿ ಆಚರಿಸುತ್ತಿದೆ.
1947ರಲ್ಲಿ ಭಾರತದ ವಿಭಜನೆಯ ನಂತರ ಪಾಕಿಸ್ತಾನವು ಮುಸ್ಲಿಂ ರಾಷ್ಟ್ರವಾಗಿ ರೂಪುಗೊಂಡಿತು.