ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಗಣೇಶನ ಬಗ್ಗೆ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್ ಮಾಡಿದ ಹೋಂಸ್ಟೇ ನಿರ್ವಾಹಕರ ವಿರುದ್ಧ ಮಹಾರಾಷ್ಟ್ರದಲ್ಲಿ ದೂರು ದಾಖಲಾಗಿದೆ.
ತಿರುವನಂತಪುರಂನ ಕುಂದಮಂಕದಂನಲ್ಲಿ ಸಾಲಗ್ರಾಮ ಎಂಬ ಹೋಂಸ್ಟೇ ನಡೆಸುತ್ತಿರುವ ಸ್ವಾಮಿ ಸಂದೀಪಾನಂದ ಗಿರಿ ವಿರುದ್ಧ ಮುಂಬೈ ಸಮೀಪದ ಪಾಲ್ಘರ್ ಜಿಲ್ಲೆಯ ವಸೈ ಮತ್ತು ಮಾಣಿಕ್‍ಪುರ ಪೋಲೀಸರು ದೂರು ಸ್ವೀಕರಿಸಿದ್ದಾರೆ. ವಸಾಯಿ ನಿವಾಸಿ ಕೆ.ಬಿ.ಉತ್ತಮಕುಮಾರ್ ದೂರುದಾರರು.
ಹಿಂದೂಗಳ ಆರಾಧ್ಯ ದೈವವಾದ ಗಣೇಶನನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಮೂಲಕ ಕೋಟ್ಯಂತರ ಭಕ್ತರಿಗೆ ಸಂಕಷ್ಟ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಂದೀಪಾನಂದ ಗಿರಿ ಅವರು ಸಿಪಿಎಂನ ಬೆಂಬಲಿಗ ವ್ಯಕ್ತಿಯಾಗಿದ್ದು, ಹಿಂದಿನಿಂದಲೂ ಹಿಂದೂ ನಂಬಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಉತ್ತಮಕುಮಾರ್ ಆರೋಪಿಸಿದ್ದಾರೆ. ಸಂದೀಪಾನಂದರ ಚಟುವಟಿಕೆಗಳು ಸಮಾಜದಲ್ಲಿ ಧಾರ್ಮಿಕ ಮನೋಭಾವನೆಯನ್ನು ತಿರುವುಮುರುವುಗೊಳಿಸುತ್ತಿದೆ. ಪುರಾಣದ ಭಾಗಗಳನ್ನು ತಪ್ಪಾಗಿ ಬಿಂಬಿಸುವ ಮೂಲಕ ಹಿಂದೂ ಆರಾಧನೆಯ ಆರಾಧ್ಯ ದೈವವಾದ ಗಣೇಶನ ವಿರುದ್ಧ ಹೇಳಿದ ಹೇಳಿಕೆಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ವಸಾಯಿ ವಿರಾರ್ ಉಪ ಪೆÇಲೀಸ್ ಆಯುಕ್ತೆ ಪೂರ್ಣಿಮಾ ಚೌಗುಲೆ ಮತ್ತು ವಸಾಯಿ ಮಾಣಿಕಪುರ ಪೆÇಲೀಸ್ ಉಪನಿರೀಕ್ಷಕ ರಾಜಶೇಖರ್ ಸಲಗರೆ ಅವರಿಗೆ ದೂರು ನೀಡಲಾಗಿದೆ. ದೂರು ಸ್ವೀಕರಿಸಿದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಉತ್ತಮಕುಮಾರ್ ತಿಳಿಸಿದರು.