ತಿರುವನಂತಪುರಂ: ರಾಜ್ಯದಲ್ಲಿ ಭಾರೀ ವಾಹನಗಳನ್ನು ಚಲಾಯಿಸುವ ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಅಕ್ಟೋಬರ್ 30ರವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ಸಚಿವ ಆಂಟೋನಿರಾಜು ಮಾಹಿತಿ ನೀಡಿದರು.
ನವೆಂಬರ್ 1 ರಿಂದ ಖಾಸಗಿ ಬಸ್‍ಗಳು ಮತ್ತು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಸೀಟ್ ಬೆಲ್ಟ್ ಕಡ್ಡಾಯಗೊಳಿಸಲಾಗಿದೆ. ಈ ಮೊದಲು ಸೆಪ್ಟೆಂಬರ್ 1ರಿಂದ ಕಡ್ಡಾಯಗೊಳಿಸಲಾಗುವುದು ಎಂದು ಹೇಳಲಾಗಿತ್ತು. ರಸ್ತೆ ಸುರಕ್ಷತೆಯ ಕುರಿತು ಉನ್ನತ ಮಟ್ಟದ ಪರಿಶೀಲನೆಯ ಸಂದರ್ಭದಲ್ಲಿ ದಿನಾಂಕ ಬದಲಾವಣೆಯನ್ನು ನಿರ್ಧರಿಸಲಾಯಿತು.