ಸಮರಸ ಚಿತ್ರಸುದ್ದಿ: ಬದಿಯಡ್ಕ: ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೇ ಭೇಟಿ ನೀಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಮಂಡಲ ಅಧ್ಯಕ್ಷ ಹರೀಶ ನಾರಂಪಾಡಿ, ವಿಶ್ವಹಿಂದೂ ಪರಿಷತ್ ಮುಖಂಡ ಹರೀಶ ರೈ, ವಕೀಲ ಗಣೇಶ್ ಬಿ. ಜೊತೆಗಿದ್ದರು. ಆಶ್ರಮದ ಪರವಾಗಿ ಕಾರ್ಯದರ್ಶಿ ರಮೇಶ್ ಕಳೇರಿ ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಗೌರವಿಸಿದರು.