ಮಂಜೇಶ್ವರ: ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಮೀಯಪದವು ನೇತೃತ್ವದಲ್ಲಿ 77 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನವವನ್ನು ಆಚರಿಸಲಾಯಿತು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಕೃಷ್ಣ ಭಟ್ ಧ್ವಜಾರೋಹಣಗೈದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ನ ಗೌರವಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಗೌರವ ಸಲಹೆಗಾರ ಜನಾರ್ಧನ್.ಎಸ್, ಅಧ್ಯಕ್ಷ ಕೃಷ್ಣ ಪ್ರಸನ್ನ, ಕಾರ್ಯದರ್ಶಿ ರವಿಶಂಕರ ರಾವ್, ಕೋಶಾಧಿಕಾರಿ ಮನೋಜ್ ರೈ, ಸದಸ್ಯರಾದ ನಿಶಾನ್ ರೈ, ರಘು ರಾವ್, ಕಿರಣ್ ಭಟ್, ವಿಷ್ಣುಕಾಂತ್, ಅನೂಪ್ ರೈ, ಪ್ರಜ್ಞೆಶ್ ಶೆಟ್ಟಿ, ಅಕ್ಷಯ ಮೊದಲಾದವರು ಉಪಸ್ಥಿತರಿದ್ದರು.