ಕಣ್ಣೂರು: ರೈಲುಗಳ ಮೇಲೆ ದಾಳಿಯ ಘಟನೆಗಳು ಪುನರಾವರ್ತನೆಯಾಗುತಿರುವ ಮಧ್ಯೆ ಇದರ ಹಿಂದೆ ಯಾವುದೇ ವಿಧ್ವಂಸಕ ಕೃತ್ಯ ನಡೆದಿಲ್ಲ ಎಂಬ ಪೆÇಲೀಸರ ಹೇಳಿಕೆ ಹೆಚ್ಚು ನಿಗೂಢವಾಗುತ್ತಿದೆ.
ರಾಜ್ಯದಲ್ಲಿ ರೈಲುಗಳ ಮೇಲಿನ ಇತರ ದಾಳಿಗಳ ಶಂಕಿತರನ್ನು ಇನ್ನೂ ಬಂಧಿಸಲಾಗಿಲ್ಲ. ಕೇಂದ್ರೀಯ ಸಂಸ್ಥೆಗಳು ಚಾಲ್ತಿಯಲ್ಲಿರುವ ಸಂದರ್ಭಗಳ ಆಧಾರದ ಮೇಲೆ ಪ್ರಕರಣವನ್ನು ತನಿಖೆ ಮಾಡಬಹುದು.
ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದ ಶಂಕಿತ ಆರೋಪಿಯನ್ನು ಕಣ್ಣೂರು ಪರಕಂಡಿ ಕಡೆಯಿಂದ ಬಂಧಿಸಲಾಗಿದ್ದರೂ, ಇದೇ ರೀತಿಯ ಇತರ ಹಿಂಸಾಚಾರದ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಕಣ್ಣೂರಿನ ವಂದೇಭಾರತದಲ್ಲಿ ನಡೆದ ಕಲ್ಲು ತೂರಾಟದ ನಂತರ ಕಾಸರಗೋಡಿನ ಕೋಟಿಕುಳಂನಲ್ಲಿ ರೈಲು ಹಳಿಯ ಮೇಲೆ ಕಲ್ಲುಗಳು ಮತ್ತು ಸ್ಲಾಬ್ ಕಲ್ಲುಗಳ ಒಡೆದ ಭಾಗಗಳು ಪತ್ತೆಯಾಗಿವೆ. ಇದೂ ಕೂಡ ರೈಲನ್ನು ಧ್ವಂಸಗೊಳಿಸುವ ಯತ್ನ ಎಂಬುದು ಸ್ಪಷ್ಟವಾಗಿದೆ.
ಕಳೆದ ವರ್ಷ ಜುಲೈ 19ರಂದು ಕಣ್ಣೂರು ವಲಪಟ್ಟಣ ರೈಲ್ವೆ ಸೇತುವೆ ಬಳಿ ಜಲ್ಲಿಕಲ್ಲು ಹಾಕಿ ರೈಲು ಅಪಘಾತ ಉಂಟು ಮಾಡುವ ಯತ್ನ ನಡೆದಿತ್ತು. ಕಾಸರಗೋಡು ಮತ್ತು ಕಣ್ಣೂರು ರೈಲುಗಳ ಮೇಲೆ ಕಲ್ಲು ತೂರಾಟ ನಡೆಯುವ ಒಂದು ವಾರದ ಹಿಂದೆ ಕಣ್ಣೂರು-ಮಂಗಳೂರು ಪ್ಯಾಸೆಂಜರ್ ರೈಲಲ್ಲಿ ಅನುಮಾನಾಸ್ಪದವಾಗಿ ಬೆದರಿಕೆಯ ಸಾಲುಗಳನ್ನು ಬರೆದಿರುವುದು ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕಾಸರಗೋಡು ಎಸ್ಪಿ ನೇತೃತ್ವದಲ್ಲಿ ಇನ್ನೂ ತನಿಖೆ ನಡೆಯುತ್ತಿದೆ. ಆದರೆ ಇಂತಹ ಘಟನೆಗಳ ಹಿಂದೆ ಯಾವುದೇ ವಿದ್ವಂಸಕತೆ ಇಲ್ಲ ಎಂದು ಪೋಲೀಸರು ಪದೇ ಪದೇ ಹೇಳುತ್ತಿದ್ದಾರೆ.