HEALTH TIPS

'ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಪಾಕ್‌ನಿಂದ ಮಾದಕ ವ್ಯಸನದ ಉಡುಗೊರೆ'

                ಶ್ರೀನಗರ (PTI): 'ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಮಾದಕ ವ್ಯಸನವನ್ನು ಉಡುಗೊರೆಯಾಗಿ ನೀಡುತ್ತಿದೆ' ಎಂದು ಇಲ್ಲಿನ ಡಿಜಿಪಿ ದಿಲ್‌ಬಾಗ್‌ ಸಿಂಗ್‌ ಮಂಗಳವಾರ ಆತಂಕ ವ್ಯಕ್ತಪಡಿಸಿದ್ದಾರೆ.

                'ಮಾದಕ ವಸ್ತು ಪೂರೈಕೆ ಸಂಚು ಪಾಕಿಸ್ತಾನದ್ದು. ಭಯೋತ್ಪಾದನೆಯು ಪಂಜಾಬ್‌ನಲ್ಲಿ ನಿರ್ಮೂಲನವಾಗುವ ಸಂದರ್ಭದಲ್ಲಿ ಪಾಕಿಸ್ತಾನ ಆ ಪ್ರದೇಶದಲ್ಲಿ ಮಾದಕ ವಸ್ತುವನ್ನು ಪರಿಚಯಿಸಿತ್ತು.

              ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಉಗ್ರವಾದವನ್ನು ನಾಶಗೊಳಿಸುತ್ತಿದ್ದಾರೆ. ಆದರೆ ಪಾಕಿಸ್ತಾನವು ಇಲ್ಲಿನ ಯುವಕರಿಗೆ ಮಾದಕ ವ್ಯಸನದ ಉಡುಗೊರೆಯನ್ನು ನೀಡುತ್ತಿದ್ದಾರೆ. ನಾವು ಸದಾ ಎಚ್ಚರವಾಗಿದ್ದು ಈ ಸಂಚನ್ನು ವಿಫಲಗೊಳಿಸಬೇಕಾದ ಅನಿವಾರ್ಯತೆ ಇದೆ' ಎಂದು ಅವರು ಹೇಳಿದರು.

                'ಮಾದಕ ವಸ್ತು- ಭಯೋತ್ಪಾದನೆ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ನ್ಯಾರ್ಕೋಟಿಕ್‌ ಡ್ರಗ್ಸ್‌ ಆಯಂಡ್‌ ಸೈಕೋಟ್ರಾಪಿಕ್‌ (ಎನ್‌ಡಿಪಿಎಸ್‌) ಕಾಯ್ದೆಯಡಿ 2 ಸಾವಿರ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಈ ಸಂಬಂಧ 3 ಸಾವಿರ ಮಂದಿಯನ್ನು ಬಂಧಿಸಿದ್ದಾರೆ' ಎಂದರು.

                 'ಪಾಕಿಸ್ತಾನ ಬೆಂಬಲಿತ ಮಾದಕವಸ್ತು- ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ವ್ಯಾಪಾರದ ವಿರುದ್ಧ ನಾವು ಯಶ ಸಾಧಿಸಿದ್ದೇವೆ. ನಮ್ಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದೇವೆ. ಎನ್‌ಡಿಪಿಎಸ್‌ ಕಾಯ್ದೆ ಹಾಗೂ ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿ ಇದೇ ಪ್ರಥಮಬಾರಿಗೆ ಇಷ್ಟೊಂದು ಆರೋಪಿಗಳನ್ನು ಬಂಧಿಸಲಾಗಿದೆ. ಮಾದಕವ್ಯಸನ- ಭಯೋತ್ಪಾದಕತೆ ಮೂಲಕ ಸಂಪಾದಿಸಲಾದ ಸ್ವತ್ತುಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ' ಎಂದು ಮಾಹಿತಿ ನೀಡಿದರು.

                  'ಮಾದಕ ವ್ಯಸನವು ಸಮಾಜಕ್ಕೆ ಅಪಾಯಕಾರಿ. ಮಕ್ಕಳು ವ್ಯಸನದಿಂದ ದೂರವಿರಿ. ಇದರ ಪರಿಣಾಮ ದೀರ್ಘ ಕಾಲದವರೆಗೆ ಇರುತ್ತದೆ' ಎಂದು ಅವರು ಮನವಿ ಮಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries