ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಪೌಢ ಶಾಲೆಯಲ್ಲಿ 77 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಾಯುಸೇನಾ ನಿವೃತ್ತ ಯೋಧ ನರಸಿಂಹ ಭಟ್ ಬಾಳೆಮೂಲೆ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಶಾಲಾ ಗ್ರಂಥಾಲಯ ಸಭಾಂಗಣದಲ್ಲಿ ಜರುಗಿತು. ಶಾಲಾ ಮುಖ್ಯ ಶಿಕ್ಷಕ ಕೇಶವ ಪ್ರಕಾಶ್ ಎನ್, ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ವಾಯುಸೇನೆಯಲ್ಲಿನ ಕರ್ತವ್ಯ, ದೇಶ ಸೇವೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ ಯಸ್, ಗ್ರಾಮ ಪಂಚಾಯಿತಿ ಸದಸ್ಯೆ ರಮ್ಲಾ ಪೆರ್ಲ , ಆಡಳಿತ ಮಂಡಳಿ ಉಪಾಧ್ಯಕ್ಷರಾದ ಸದಾಶಿವ ಭಟ್ ಹರಿನಿಲಯ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಶೋತ್ತಮ ಪೆರ್ಲ, ಉಪಾಧ್ಯಕ್ಷ ನಾರಾಯಣ ನಾಯಕ್, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಸಂದರ್ಭ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಶಿಕ್ಷಕ ವೇಣುಗೋಪಾಲ ಯಸ್ ಸ್ವಾತಿಸಿದರು. ಅಧ್ಯಾಪಕರಾದ ಪ್ರವೀಣ್ ವಿ. ಕಾರ್ಯಕ್ರಮ ನಿರೂಪಿಸಿದರು. ಶ್ರೀಕೃಷ್ಣಪ್ರಕಾಶ್ ವಂದಿಸಿದರು
ಶಾಲಾ ಮುಖ್ಯ ಶಿಕ್ಷಕ ಕೇಶವ ಪ್ರಕಾಶ್ ಎನ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಆಯೋಜಿಸಲಾಗಿದ್ದ ಮೆರವಣೀಗೆಯಲ್ಲಿ ಶಾಲಾ ಎನ್‍ಸಿಸಿ ಕ್ಯಾಡೆಟ್‍ಗಳು, ವಿದ್ಯಾರ್ಥಿಘಳು, ಶಿಕ್ಷಕರು, ಹೆತ್ತವರು ಪಾಲ್ಗೊಂಡಿದ್ದರು.