ನವದೆಹಲಿ: ನಿಯಮಗಳಿಗೆ ವಿರುದ್ಧವಾಗಿ ಸದನದ ಕಲಾಪಗಳನ್ನು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರ ಅಮಾನತು ಆದೇಶವನ್ನು ಸೋಮವಾರ ರಾಜ್ಯಸಭೆ ಹಿಂಪಡೆದಿದೆ.
ನವದೆಹಲಿ: ನಿಯಮಗಳಿಗೆ ವಿರುದ್ಧವಾಗಿ ಸದನದ ಕಲಾಪಗಳನ್ನು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರ ಅಮಾನತು ಆದೇಶವನ್ನು ಸೋಮವಾರ ರಾಜ್ಯಸಭೆ ಹಿಂಪಡೆದಿದೆ.
ಮಹಾರಾಷ್ಟ್ರದ ಸಂಸದೆಯಾಗಿರುವ ರಜನಿ ಅವರು ಇದೇ ವರ್ಷ ಫೆ. 10ರಂದು ಬಜೆಟ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಅವರಿಗೆ ವಂದನೆ ಸಲ್ಲಿಸುವಾಗ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.