ಬದಿಯಡ್ಕ: ಯುದ್ಧವು ಜಗತ್ತಿಗೆ ವಿನಾಶಕಾರಿಯಾದುದು. 1945 ರಲ್ಲಿ ಜಪಾನ್ ನ ಹಿರೋಶಿಮಾ ಮತ್ತು ನಾಗಸಾಕಿ ಪಟ್ಟಣದಲ್ಲಿ ಹಾಕಲ್ಪಟ್ಟ ಪರಮಾಣು ಬಾಂಬ್ ಅಪಾರ ಸಂಖ್ಯೆಯ ನಾಶ ಉಂಟು ಮಾಡಿತು. ಸಮಾಜದಲ್ಲಿ ಶಾಂತಿ ನೆಮ್ಮದಿ ಇದ್ದಾಗ ಅಭಿವೃದ್ಧಿ ಸಾಧ್ಯ ಎಂದು ಶಿಕ್ಷಕ ಬಿನೋಯ್ ಅವರು ಅಭಿಪ್ರಾಯ ಪಟ್ಟರು.
ಪೆರಡಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರೋಶಿಮಾ ದಿನಾಚರಣೆ ಅಂಗವಾಗಿ ನಡೆಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿನಿ ಲಾವಣ್ಯ ದಿನದ ಮಹತ್ವ ವಿವರಿಸಿದರು. ವಿದ್ಯಾರ್ಥಿನಿ ಅನವದ್ಯ ಸಡಾಕೋ ನಿರ್ಮಾಣದ ಹಿನ್ನೆಲೆ ಮಂಡಿಸಿದರು. ಯುದ್ಧ ವಿರೋಧಿ ಶಾಂತಿ ಗೀತೆ ಹಾಡಲಾಯಿತು. ಗೋಪಾಲಕೃಷ್ಣ ಭಟ್ ವಂದಿಸಿದರು. ಶ್ರೀಧರನ್, ಸಿಜಿ ಥಾಮಸ್, ರಿಶಾದ್, ಜಯಲತ, ಶೀನಾ ಸಹಕರಿಸಿದರು. ಸಡಾಕೋ ಸಜಾಕಿ ಸ್ಮರಣಾರ್ಥ ಹಕ್ಕಿಯ ಪ್ರತಿಕೃತಿ ತಯಾರಿಯ ವಿಶೇಷ ತರಗತಿ ನಡೆಸಲಾಯಿತು. ಯುದ್ಧವಿರೋಧಿ ಶಾಂತಿ ಘೋಷಣೆ ರಚಿಸಲಾಯಿತು.