HEALTH TIPS

ಕ್ಸಿ ಜಿನ್​ಪಿಂಗ್​- ಪ್ರಧಾನಿ ಮೋದಿ ಭೇಟಿ: ಚೀನಾ ವಾದಕ್ಕೆ ಖಡಕ್​ ತಿರುಗೇಟು ಕೊಟ್ಟ ಭಾರತ

              ವದೆಹಲಿ: ದಕ್ಷಿಣಾ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಬ್ರಿಕ್ಸ್​ ಶೃಂಗಸಭೆಯ ವೇಳೆ ಭಾರತದ ಮನವಿ ಮೇರೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂಬ ಚೀನಾ ವಾದವನ್ನು ಭಾರತ ಸರ್ಕಾರ ತಿರಸ್ಕರಿಸಿದೆ.

                ಅಲ್ಲದೆ, ಚೀನಾದಿಂದಲೇ ಮನವಿ ಬಂದಿದೆ ಎಂದು ಭಾರತ ಹೇಳಿದೆ

ದ್ವಿಪಕ್ಷೀಯ ಸಭೆ ನಡೆಸಲು ಚೀನಾ ಸರ್ಕಾರ ಮನವಿ ಮಾಡಿದೆ. ಆದರೆ, ಆ ಮನವಿಯನ್ನು ನಾವಿನ್ನೂ ಪುರಸ್ಕರಿಸಿಲ್ಲ. ಆದರೆ, ಬ್ರಿಕ್ಸ್​ ಶೃಂಗಸಭೆಯ ಸಂದರ್ಭದಲ್ಲಿ ನಾಯಕರ ವಿಶ್ರಾಂತಿ ಸಮಯದಲ್ಲಿ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್​ಪಿಂಗ್​ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.

               ಆ. 23ರಂದು ಭಾರತ ಮನವಿ ಮಾಡಿದ ಹಿನ್ನೆಲೆಯಲ್ಲಿ ಬ್ರಿಕ್ಸ್​ ಶೃಂಗಸಭೆ ಹೊರತಾಗಿ ಪ್ರಧಾನಿ ಮೋದಿ ಜತೆ ಕ್ಸಿ ಜಿನ್​ಪಿಂಗ್​ ಮಾತುಕತೆ ನಡೆಸಿದರು ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. 2020ರ ಜೂನ್​ ತಿಂಗಳಿನಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶದ ಯೋಧರು ಶುರು ಮಾಡಿದ ಘರ್ಷಣೆಯಿಂದಾಗಿ ಎರಡೂ ದೇಶಗಳ ನಡುವೆ ಇಂದಿಗೂ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ಉಲ್ಬಣಗೊಂಡಿರುವ ಆತಂಕದ ಸ್ಥಿತಿಯನ್ನು ತ್ವರಿತವಾಗಿ ಪರಿಹರಿಸಲು ಸಭೆಯಲ್ಲಿ ಇಬ್ಬರು ನಾಯಕರು ಒಪ್ಪಿಕೊಂಡರು ಎಂದು ಹೇಳಲಾಗಿದೆ.

                 ಆದರೆ, ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಪ್ರಕಾರ, ಇದು ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಂಭಾಷಣೆಯಾಗಿದೆ. ಇತರ ಬ್ರಿಕ್ಸ್ ನಾಯಕರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು. ಇದೇ ವೇಳೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಂವಾದದಲ್ಲಿ, ಭಾರತ-ಚೀನಾ ಗಡಿಯಲ್ಲಿನ ಪ್ರದೇಶಗಳಲ್ಲಿ ಬಗೆಹರಿಯದ ಸಮಸ್ಯೆಗಳ ಬಗ್ಗೆ ಭಾರತದ ಕಳವಳಗಳನ್ನು ಪ್ರಧಾನಿ ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ.

ಚೀನಾ-ಭಾರತ ಸಂಬಂಧಗಳನ್ನು ಸುಧಾರಿಸುವುದು ಎರಡು ದೇಶಗಳು ಮತ್ತು ಜನರ ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸುತ್ತದೆ ಮತ್ತು ಶಾಂತಿ, ಸ್ಥಿರತೆ ಹಾಗೂ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎರಡೂ ಕಡೆಯವರು ತಮ್ಮ ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಜಂಟಿಯಾಗಿ ಕಾಪಾಡಲು ಗಡಿ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಕ್ಸಿ ಜಿನ್​ಪಿಂಗ್​ ಬ್ರಿಕ್ಸ್​ ಸಭೆಯಲ್ಲಿ ನೀಡಿದ ಹೇಳಿಕೆಯನ್ನು ಚೀನಾದ ವಿದೇಶಾಂಗ ಕಾರ್ಯಾಲಯ ಉಲ್ಲೇಖಿಸಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries