ತಿರುವನಂತಪುರಂ: ಫ್ಯಾಷನ್ ಗೋಲ್ಡ್ ಹೂಡಿಕೆ ವಂಚನೆ ಪ್ರಕರಣದಲ್ಲಿ ಎಂಡಿಗಳ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಮಂಜೇಶ್ವರದ ಮಾಜಿ ಶಾಸಕ ಎಂ.ಸಿ.ಕಮರುದ್ದೀನ್ ಮತ್ತು ಪೂಕೋಯ ತಂಙಳ್ ಅವರ ಹೆಸರಿನಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಅಪರಾಧ ವಿಭಾಗದ ವರದಿ ಆಧರಿಸಿ ಕಂಪನಿಯ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಅನಿಯಂತ್ರಿತ ಹೂಡಿಕೆ ಯೋಜನೆಗಳ ನಿಷೇಧ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರವಾಗಿರುವ ರಾಜ್ಯ ಹಣಕಾಸು ಕಾರ್ಯದರ್ಶಿ ಜಪ್ತಿ ಆದೇಶ ಹೊರಡಿಸಿದ್ದಾರೆ. ಆರೋಪಿಗಳು ವಶಪಡಿಸಿಕೊಂಡ ಆಸ್ತಿಗಳ ಆದಾಯವನ್ನು ತೆಗೆದುಕೊಂಡು ಅವುಗಳನ್ನು ಮರುಮಾರಾಟ ಮಾಡದಂತೆ ತಡೆಯಲಾಗಿದೆ.
ವಶಪಡಿಸಿಕೊಂಡ ನಿವೇಶನಗಳು
ಅಧ್ಯಕ್ಷ ಎಂ.ಸಿ. ಕಮರುದ್ದೀನ್ ಎಂ.ಡಿ.ಪೂಕೋಯ ತಂಙಳ್ ಅವರ ಹೆಸರಿನಲ್ಲಿ ಪಯ್ಯನ್ನೂರು ಟೌನ್‍ನಲ್ಲಿರುವ ಫ್ಯಾಶನ್ ಆರ್ನಮೆಂಟ್ಸ್ ಜ್ಯುವೆಲ್ಲರಿ ಕಟ್ಟಡ, ಬೆಂಗಳೂರಿನ ಸಿಲಿಕುಂದ ಗ್ರಾಮದಲ್ಲಿ ಪೂಕೋಯ ಅವರು ತಮ್ಮ ಹೆಸರಿನಲ್ಲಿ ಖರೀದಿಸಿರುವ ಒಂದು ಎಕರೆ ಜಮೀನು, ಖಮರುದ್ದೀನ್ ಫಾÀ್ಷನ್ ಗೋಲ್ಡ್ ಗಾಗಿ ಕಾಸರಗೋಡು ಪೇಟೆಯಲ್ಲಿ ಎಂ.ಸಿ ಕಮರುದ್ದೀನ್ ಮತ್ತು ಪೂಕೋಯ ಎಂಬುವರ ಹೆಸರಿನಲ್ಲಿ ಖರೀದಿಸಲಾದ ಜಮೀನು, ಪೂಕೋಯ ಅವರ ಹೆಸರಿನಲ್ಲಿ ಹೊಸದುರ್ಗ ತಾಲೂಕು ಮಾಣಿಯಾಟ್‍ನಲ್ಲಿ 17.29 ಸೆಂಟ್ಸ್, ಎಂ.ಸಿ.ಕಮರುದ್ದೀನ್ ಹೆಸರಿನಲ್ಲಿ ಉದಿನೂರು ಗ್ರಾಮದಲ್ಲಿ 17 ಸೆಂಟ್ಸ್ ಮತ್ತು ಉದಿನೂರು ಗ್ರಾಮದಲ್ಲಿ ಅವರ ಪತ್ನಿಯ ಹೆಸರಿನ 23 ಸೆಂಟ್ಸ್ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು.