ಕಾಸರಗೋಡು: ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಟೌನ್ ಬೇಂಕ್ ಹಾಲ್ ವಿಶೇಷ ಸಭೆ ನಡೆಯಿತು. ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ನಾರಾಯಣನ್ ಕುಟ್ಟಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಡಿ. 15ಕ್ಕೆ ತಿರುವನಂತಪುರಂನಲ್ಲಿ ನಡೆಯಲಿರುವ ಕರ್ಷಕ ಹಕ್ಕುಗಳ ಮಹಾ ರ್ಯಾಲಿಯ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ಕಿಸಾನ್ ಸಂಘದ ರಾಜ್ಯ ಘಟಕದ ಹಿರಿಯ ಅಧಿಕಾರಿ ರಮೇಶ್, ರಾಜ್ಯ ಉಪಾಧ್ಯಕ್ಷ ರಾಮ ಮಾಸ್ತರ್ ಭಾಗವಹಿಸಿದ್ದರು. ಕುಞರಾಮನ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಚರ್ಚೆಯಲ್ಲಿ ಸುರೇಶ್ ಹೊಳ್ಳ, ಶಂಕರ ನಾರಾಯಣ ಭಟ್ ಕಿದೂರು, ರಾಮಚಂದ್ರ ಉಳುವಾನ, ರಂಜಿತ್, ಸತೀಶ್ ಚಂದ್ರ ಮೊದಲಾದವರು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸದಾನಂದ ಶೆಟ್ಟಿ ಕೊಮ್ಮಂಡ ಸ್ವಾಗತಿಸಿ, ವಿನೋದ್ ಕೊಜಪ್ಪೆ ವಂದಿಸಿದರು. ರಾಮಚಂದ್ರ ಮಾಸ್ತರ್ ಉಳುವಾನ ಪ್ರಾರ್ಥನೆ ಹಾಡಿದರು.