HEALTH TIPS

ಅಮೆರಿಕ ರಾಷ್ಟ್ರೀಯ ಭದ್ರತೆಗೆ ಭಾರತದ ಜತೆಗಿನ ಸ್ನೇಹ ಮುಖ್ಯ: ಥಾಣೆದಾರ್‌

                ವದೆಹಲಿ: ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ಹಿಮ್ಮೆಟ್ಟಿಸಲು ಮತ್ತು ಉಕ್ರೇನ್ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸಲು ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಮತ್ತು ತಂತ್ರಜ್ಞಾನ ಪಾಲುದಾರಿಕೆಯು ನಿರ್ಣಾಯಕವಾಗಿದೆ ಎಂದು ಅಮೆರಿಕ ಕಾಂಗ್ರೆಸ್ ಸದಸ್ಯ ಥಾನೆದಾರ್‌ ಭಾನುವಾರ ಅಭಿಪ್ರಾಯಪಟ್ಟಿದ್ದಾರೆ.

                ಎರಡೂ ದೇಶಗಳ ನಡುವಿನ ಸಂಬಂಧವು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಬಹಳ ಮುಖ್ಯ ಎಂಬುದು ಅಮೆರಿಕ ಕಾಂಗ್ರೆಸ್‌ನಲ್ಲಿರುವ ಸಾಮಾನ್ಯ ಅಭಿಪ್ರಾಯವೂ ಆಗಿದೆ ಎಂದೂ ಥಾಣೆದಾರ್‌ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

                ಆಗಸ್ಟ್ 15 ರಂದು ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಲಿರುವ ಭಾಷಣವೂ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಮೆರಿಕ ಸಂಸದರ ಉಭಯಪಕ್ಷೀಯ ನಿಯೋಗ ಭಾರತಕ್ಕೆ ಆಗಮಿಸಿದೆ. ನಿಯೋಗದಲ್ಲಿ ಭಾರತ ಮೂಲದ ಅಮೆರಿಕನ್‌ ಸಂಸದ ಥಾನೆದಾರ್‌ ಕೂಡ ಇದ್ದಾರೆ.

                 'ಭಾರತದೊಂದಿಗಿನ ನಿಕಟ ಬಾಂಧವ್ಯಕ್ಕೆ ಅಮೆರಿಕದಲ್ಲಿ ಉಭಯಪಕ್ಷೀಯ ಬೆಂಬಲವಿದೆ. ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲು ಜೂನ್‌ನಲ್ಲಿ ಅಮೆರಿಕಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ಡೆಮೊಕ್ರಟಿಕ್‌ ಮತ್ತು ರಿಪಬ್ಲಿಕನ್‌ ಸದಸ್ಯರು ಆತ್ಮೀಯವಾಗಿ ಸ್ವಾಗತ ನೀಡಿದ್ದೇ ಇದಕ್ಕೆ ಸಾಕ್ಷಿ' ಎಂದು ಅವರು ಅಭಿಪ್ರಾಯಪಟ್ಟರು.

               'ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯು ಬಹಳ ಮಹತ್ವದ್ದಾಗಿತ್ತು. ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್‌ ನಡುವಿನ ಸ್ನೇಹವು ಎರಡೂ ರಾಷ್ಟ್ರಗಳ ಬಾಂಧವ್ಯವದಲ್ಲಿ ಹೊಸ ಮನ್ವಂತರವಾಗಿತ್ತು ' ಎಂದು ಅವರು ಹೇಳಿದರು.

               'ನಮ್ಮ ಭಾರತ ಭೇಟಿಯು ಆ ಸಂಬಂಧವನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ' ಎಂದು ಅವರು ತಿಳಿಸಿದರು.

                  ಕಾಂಗ್ರೆಸ್‌ ಸದಸ್ಯರಾದ ರೋ ಖನ್ನಾ ಮತ್ತು ಮೈಕೆಲ್ ವಾಲ್ಟ್ಜ್‌ ಉಭಯಪಕ್ಷೀಯ ನಿಯೋಗದ ನೇತೃತ್ವ ವಹಿಸಿದ್ದಾರೆ. ಇಬ್ಬರೂ ಭಾರತ ಮೂಲದ ಅಮೆರಿಕನ್ನರ ಉಭಯಪಕ್ಷೀಯ ಕಾಂಗ್ರೆಸ್‌ ಸಮಿತಿಯ ಸಹ-ಅಧ್ಯಕ್ಷರೂ ಆಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries