ಬದಿಯಡ್ಕ: ಕುಂಠಿಕಾನ ಮಠ ಶ್ರಿ ಶಂಕರನಾರಾಯಣ ದೇವಾಲಯದ ವಠಾರದಲ್ಲಿ ಭಾನುವಾರ ಕಾರ್ಮಾರು ಮಹಾವಿಷ್ಣು ಮಹಿಳಾ ಸಂಘದವರಿಂದ ಪರಿಸರ ಶುಚೀಕರಣದ ಶ್ರಮದಾನ ಸೇವೆ ನಡೆಯಿತು.
ಸಂಘದ ಅಧ್ಯಕ್ಷೆ ಜ್ಯೋತಿ ಕಾರ್ಮಾರು ನೇತೃತ್ವ ವಹಿಸಿದ್ದರು. ಸದಸ್ಯೆಯರಾದ ಉಷಾ, ಲಲಿತಾ, ಶಶಿಕಲಾ, ಶಶಿ,. ಲಕ್ಷ್ಮಿ, ಉಷಾ, ಉಮಾವತಿ, ಸರಸ್ವತಿ, ಸರೋಜಿನಿ ಹಾಗೂ ಶ್ರೀಜ ನಾರಾಯಣ, ಸುರೇಶ ಸಹಕಾರ ನೀಡಿದರು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ.ಶಂಕರನಾರಾಯಣ ಭಟ್ ಮಾರ್ಗ ದರ್ಶನ ನೀಡಿ ಶ್ರಿ ದೇವರ ಪ್ರಸಾದ ನೀಡಿ ಅಭಿನಂದಿಸಿದರು. ಸತೀಶ್ ಕೆ.ಎಂ. ಪ್ರಸಾದ ಭೋಜನ ವಿತರಿಸಿದರು.