ಬದಿಯಡ್ಕ: ಚಿನ್ಮಯ ವಿದ್ಯಾಲಯ ಬದಿಯಡ್ಕ ಶಾಲೆಯಲ್ಲಿ ಓಣಂ ಹಬ್ಬ ಆಚರಿಸಲಾಯಿತು. ಶಾಲೆಯ ಮೇಲ್ವಿಚಾರಕ ಪ್ರಶಾಂತ್ ಬೆಳಿಂಜ ಅವರು ಓಣಂ ಹಬ್ಬದ ವಿಶೇಷತೆ ಹಾಗೂ ಮಹಾಬಲಿ, ವಾಮನರ ಐತಿಹ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಮಾನಸ ಉಪಸ್ಥಿತರಿದ್ದರು. ಓಣಂ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿ ಪ್ರಣಮ್ಯದೇವಿ ಸ್ವಾಗತಿಸಿದರು. ವಿದ್ಯಾರ್ಥಿ ಸಮನ್ವಿತ ಕಾರ್ಯಕ್ರಮದ ನಿರೂಪಿಸಿದರು. ಅಭಯ ಚರಣ ಪುಂಡೂರು ವಂದಿಸಿದರು.