ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ವಿಗ್ರಹಗಳು ಪತ್ತೆಯಾಗಿವೆ ಎಂಬ ವದಂತಿಯ ಕುರಿತು ಪರಿಶೀಲಿಸದಿದ್ದರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸುತ್ತಿರುವ ವೈಜ್ಞಾನಿಕ ಸಮೀಕ್ಷೆಯಿಂದ ದೂರ ಉಳಿಯುವುದಾಗಿ ಮುಸ್ಲಿಂ ಪ್ರತಿನಿಧಿಗಳು ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಸಮೀಕ್ಷೆಯ ವೇಳೆ ಮಸೀದಿಯ ನೆಲ ಅಂತಸ್ತಿನಲ್ಲಿ ವಿಗ್ರಹಗಳು, ತ್ರಿಶೂಲ ಮತ್ತು ಹೂಜಿ ಪತ್ತೆಯಾಗಿದೆ ಎಂದು ಕೆಲ ಮಾಧ್ಯಮಗಳು ವದಂತಿಗಳನ್ನು ಹರಡುತ್ತಿವೆ ಎಂದು ಮುಸ್ಲಿಂ ಅರ್ಜಿದಾರರ ಪರ ವಕೀಲರಾದ ಮುಮ್ತಾಜ್ ಅಹಮ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಜ್ಞಾನವಾಪಿಯು ಎಂದೆಂದಿಗೂ ಮಸೀದಿಯಾಗಿಯೇ ಉಳಿಯಲಿದೆ' ಎಂದು ಮುಸ್ಲಿಂ ಧರ್ಮಗುರುವೊಬ್ಬರು ಹೇಳಿದ್ದಾರೆ.
ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಯು ಮೂರನೇ ದಿನವಾದ ಭಾನುವಾರವೂ ಮುಂದುವರಿಯಿತು.
ಮಸೀದಿ ಆವರಣವನ್ನು ಅಗೆಯದೆ 'ಭೂ ಭೇದಕ ರೇಡಾರ್' (ಜಿಪಿಆರ್) ಬಳಸಿ ಸಮೀಕ್ಷೆ ನಡೆಸಲು ಎಎಸ್‌ಐ ತಂಡ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.